ವಾಷಿಂಗ್ಟನ್, ಅಕ್ಟೋಬರ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಬಳಿಕ ಇದೀಗ ಚೀನಾಗೆ ತೀಕ್ಷ್ಣವಾದ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 1ರಿಂದ ಶೇ.155ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವ್ಯಾಪಾರ ಒಪ್ಪಂದಕ್ಕೆ ಬರದಿದ್ದರೆ ನವೆಂಬರ್ 1 ರಿಂದ ಚೀನಾದ ಸರಕುಗಳ ಮೇಲೆ ಅವರ ಆಡಳಿತವು ಶೇ. 155 ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಸಭೆಯಲ್ಲಿ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ವ್ಯಾಪಾರ ಉದ್ವಿಗ್ನತೆಗಳ ಹೊರತಾಗಿಯೂ ಚೀನಾ, ಅಮೆರಿಕದೊಂದಿಗೆ ತುಂಬಾ ಗೌರವದಿಂದ ವರ್ತಿಸಿದೆ ಎಂದು ಹೇಳಿದರು.
ಅವರು ಸುಂಕದ ರೂಪದಲ್ಲಿ ನಮಗೆ ಅಪಾರ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದಾರೆ.ಹಲವು ದೇಶಗಳು ಈ ಹಿಂದೆ ಅಮೆರಿಕದ ಲಾಭ ಪಡೆದಿದ್ದರೂ, ಆ ದಿನಗಳು ಮುಗಿದುಹೋಗಿವೆ ಎಂದು ಟ್ರಂಪ್ ಹೇಳಿದರು. ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಚೀನಾ ಶೇ. 55 ಮತ್ತು ಶೇ. 155 ರಷ್ಟು ಹಣವನ್ನು ನವೆಂಬರ್ 1 ರಿಂದ ಪಾವತಿಸಲಿದೆ.
ಈ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ತಮ್ಮ ಯೋಜಿತ ಭೇಟಿಯ ಬಗ್ಗೆಯೂ ಮಾತನಾಡಿದರು. ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ನವೆಂಬರ್ 1 ರಿಂದ ಜಾರಿಗೆ ಬರುವಂತೆ ಚೀನಾದ ಸರಕುಗಳ ಮೇಲೆ ಅವರು ಪ್ರಸ್ತುತ ಪಾವತಿಸುತ್ತಿರುವ ಸುಂಕದ ಜೊತೆಗೆ 100 ಪ್ರತಿಶತ ಹೆಚ್ಚುವರಿ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಪೋಸ್ಟ್ ಮಾಡಿದ್ದರು.