ಒಂದು ಮತ ಹೆಚ್ಚಿಗೆ ಪಡೆದಿದ್ದೇನೆ ಮೊದಲ ಕಿತ್ತೂರು ತಾಲೂಕಿನ ಮೊದಲ ನಿರ್ದೇಶಕ ಆಗುವ ವಿಶ್ವಾಸ :ನಾನಾಸಾಹೇಬ ಪಾಟೀಲ
ಬೆಳಗಾವಿ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ಗೆ ನಡೆದ ಚುನಾವಣೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನಿಂದ ಮತದಾನ ಆಗಿ ಕಿತ್ತೂರು ತಾಲೂಕಿನಿಂದ ನನಗೆ ಒಂದು ಮತ ಹೆಚ್ಚಿಗೆ ಬಂದಿದ್ದು ಕೋರ್ಟ್ ಆದೇಶದ ಮೇರೆಗೆ ಜಯದ ಘೋಷಣೆ ಮಾಡಲು ಬರುವದಿಲ್ಲ ಆದ್ದರಿಂದ ಅ. 28 ಕ್ಕೆ ಕೋರ್ಟ್ ನಿರ್ಣಯದ ಪ್ರಕಾರ ನಾನು ಕಿತ್ತೂರು ತಾಲೂಕಿನ ಮೊದಲ ಡಿಸಿಸಿ ಬ್ಯಾಂಕ ನಿರ್ದೇಶಕ ಆಗುತ್ತೇನೆ ಎಂದು ಕಿತ್ತೂರು ಸಚಿವ ಸತೀಶ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿ ಯುವ ಮುಖಂಡ, ಶಾಸಕ ಬಾಬಾಸಾಹೇಬ ಪಾಟೀಲರ ಸಹೋದರ ನಾನಾಸಾಹೇಬ ಪಾಟೀಲ ಹೇಳಿದರು.
ಅವರು ನಗರದ ಬಿ ಕೆ ಮಾಡೆಲ್ ಪ್ರೌಢ ಶಾಲೆಯಲ್ಲಿ ನಡೆದ ಡಿಸಿಸಿ ಬ್ಯಾಂಕ ನಿರ್ದೇಶಕರ ಮತದಾನ ಮುಗಿದ ನಂತರ ಮಾತನಾಡಿ ಕಿತ್ತೂರು ತಾಲೂಕಿನಲ್ಲಿ ಸಹಕಾರಿ ಕ್ಷೇತ್ರದ ಅನೇಕ ಕೆಲಸ ಕಾರ್ಯಗಳನ್ನು ಮಾಡಿ, ರೈತರ ಧ್ವನಿಯಾಗಿ ನಿಲ್ಲುತ್ತೇನೆ ಎಂದರು.