ಐತಿಹಾಸಿಕ ಕುರುಹುಗಳು ನಮ್ಮ ಪೂರ್ವಜರ ಹೆಜ್ಜೆ ಗುರುತುಗಳು: ಪ್ರಹ್ಲಾದ್ ಚೌದರಿ

Ravi Talawar
ಐತಿಹಾಸಿಕ ಕುರುಹುಗಳು ನಮ್ಮ ಪೂರ್ವಜರ ಹೆಜ್ಜೆ ಗುರುತುಗಳು: ಪ್ರಹ್ಲಾದ್ ಚೌದರಿ
WhatsApp Group Join Now
Telegram Group Join Now
ಬಳ್ಳಾರಿ20: ಯಾವುದೇ ಐತಿಹಾಸಿಕ ಕುರುಹು, ದಾಖಲೆಗಳು ನಮ್ಮ ಪೂರ್ವಜನರ ಹೆಜ್ಜೆ ಗುರುತುಗಳು. ಅವರ ನಡೆಸಿದ ಜೀವನ ಶೈಲಿಯನ್ನು ‌ನಮಗೆ ಹೇಳುತ್ತವೆ. ಹೀಗೆ ಹಳೆ ನೋಟು, ನಾಣ್ಯಗಳು ಕೂಡ ಅಂದಿನ ಕಾಲದ ಆರ್ಥಿಕ ಪರಿಸ್ಥಿತಿ, ಆಡಳಿತಗಾರರು, ಜನರು ದುಡ್ಡಿಗೆ ನೀಡುತ್ತಿದ್ದ ಮಹತ್ವ ಸಾರುತ್ತವೆ ಎಂದು ಪ್ರಾಂಶುಪಾಲ ಪ್ರಹ್ಲಾದ್ ಚೌದರಿ ಹೇಳಿದರು.
ಬಳ್ಳಾರಿ ನಗರದ ಶ್ರೀಮತಿ ಸರಳಾದೇವಿ ಡಾ.ಸತೀಶ ಚಂದ್ರ ಅಗರವಾ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ಹಮ್ಮಿಕೊಂಡಿದ್ದ ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಪ್ರದರ್ಶನಕ್ಕೆ ಚಾಲನೆ ನೀಡಿ‌ ಮಾತನಾಡಿದರು. ಯಾವುದೇ‌ ಇತಿಹಾಸಕಾರ ಕೂತೊಹಲ ಕಾರಿಯಾಗಿಯೇ ಸಂಶೋಧನೆಗೆ ಇಳಿಯುತ್ತಾನೆ. ತಾನು ಸಂಗ್ರಹಿಸುವ ವಸ್ತುಗಳ ಆಳ- ಅಗಲ ಅಧ್ಯಯನವನ್ನು ಮಾಡಿ ಅದನ್ನು ಇತಿಹಾಸದಲ್ಲಿ ದಾಖಲಿಸುತ್ತಾನೆ. ಇದು ಬರುವ ಪೀಳೆಗೆಗೆ ಒಂದು ಅಧ್ಯಯನಕ್ಕೆ ಸಹಕಾರಿಯಾಗಲಿದೆ.
ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾ) ಬಳ್ಳಾರಿ ಇಲ್ಲಿ ಇತಿಹಾಸ ವಿಭಾಗದಲ್ಲಿ  ಐತಿಹಾಸಿಕ ನಾಣ್ಯ ಮತ್ತು ನೋಟುಗಳ ಸಂಗ್ರಹವೂ  ಇಂತಹದ್ದೇ ಇತಿಹಾಸ ಹೇಳುತ್ತದೆ. ರಾಜರ ಕಾಲದ ಆಳ್ವಿಕೆಯಿಂದ ಹಿಡಿದು ಬ್ರಿಟಿಷ್ ಕಾಲದ ಆಡಳಿತ, ಈಗಿನ ಸರಕಾರಗಳ ಆಡಳಿತದವರೆಗಿನಲ್ಲಿ ಚಲಾವಣೆಯಲ್ಲಿರುವ ನಾಣ್ಯ, ನೋಟು ಸಂಗ್ರಹ‌ ಮಾಡಲಾಗಿದೆ ಎಂದರು.
ಕಾಲೇಜಿನ ಶಾಂತಕುಮಾರ್ ಬಿ ಗೋಟೂರು ಇವರು ನಾಣ್ಯಗಳ  ಹಿನ್ನೆಲೆ, ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ ನಾಜಿಯಾ ಖಾಜಿ ಸೇರಿದಂತೆ ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳು  ನಾಣ್ಯ ಮತ್ತು ನೋಟುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article