ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ: ಓಲಾ  ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್​ಐಆರ್​

Ravi Talawar
ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ: ಓಲಾ  ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್​ಐಆರ್​
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್​ 20: ಬೆಂಗಳೂರಲ್ಲಿ ಓಲಾ ಕಂಪನಿ ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ ಸಂಬಂಧ ಓಲಾ  ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಸಿಇಒ ಭವೇಶ್, ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್, ಭವೀಶ್ ವಿರುದ್ಧ ಕೇಸ್ ದಾಖಲಾಗಿದೆ. ಕಂಪನಿಯ ಹೋಮೋಲೋಗೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್, ಸೆಪ್ಟೆಂಬರ್​ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಸಂಬಂಧ ಸಹಜವಾಗಿ ಪೊಲೀಸರು ಯುಡಿಆರ್​ ದಾಖಲಿಸಿಕೊಂಡಿದ್ದರು. ಆದರೆ ಅರವಿಂದ್ ಸಾವಿನ ಎರಡು ದಿನಗಳ ನಂತರ ಅವರ ಖಾತೆಗೆ ಕಂಪನಿಯಿಂದ 17 ಲಕ್ಷ 46 ಸಾವಿರ ಹಣ ಜಮೆ ಆಗಿತ್ತು. ಈ ಬಗ್ಗೆ ಅನುಮಾನದಿಂದ ಕಂಪನಿಯವರನ್ನು ಕುಟುಂಬ ಪ್ರಶ್ನಿಸಿದ್ದು, ಆ ವೇಳೆ ಕಂಪನಿಯ ಹೆಚ್​​ಆರ್ ಸೇರಿದಂತೆ ಕೆಲ ಸಿಬ್ಬಂದಿಯಿಂದ ಅಸ್ಪಷ್ಟ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕುಟುಂಬಸ್ಥರು ಮನೆಯಲ್ಲಿ ಪರಿಶೀಲಿಸಿದಾಗ ಡೆತ್​ ನೋಟ್​ ಪತ್ತೆಯಾಗಿತ್ತು.

 

WhatsApp Group Join Now
Telegram Group Join Now
Share This Article