ಬೆಳಗಾವಿ.ಅ.20: ಕಿತ್ತೂ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಜಯಗಳಿಸಿದ ಐತಿಹಾಸಿಕ ಮಹತ್ವ ಹೊಂದಿರುವ ಕಿತ್ತೂರು ಉತ್ಸವವನ್ನುದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ಮಹಿಳಾ ಉತ್ಸವವನ್ನು ಆಯೋಜಿಸಲಾಗಿದೆ.
ಮಹಿಳಾ ಉತ್ಸವದ ಅಂಗವಾಗಿ 18-35 ವರ್ಷದೊಳಗಿನ ಮಹಿಳೆಯರಿಗಾಗಿ ಕವಿಗೋಷ್ಠಿ, ಜಾನಪದ ಗೀತಗಾಯನ, ರಂಗೋಲಿ ಹಾಗೂ ಮ್ಯೂಜಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 23 ರಂದು ಮುಂಜಾನೆ10.30 ಗಂಟೆಗೆ ಕಿತ್ತೂರಿನ ರಾಜಗುರು ಕಲ್ಮಠದಲ್ಲಿ ಕವಿಗೋಷ್ಠಿ, ಮಧ್ಯಾಹ್ನ 12 ಗಂಟೆಗೆ ಜಾನಪದ ಗೀತಗಾಯನ ಸ್ಪರ್ಧೆ, ಕಿತ್ತೂರಿನ ಎಸ್.ಜೆ.ಆಯ್ ಹೈಸ್ಕೂಲಿನಲ್ಲಿ ಮಧ್ಯಾಹ್ನ 2.00 ಗಂಟೆಗೆ ರಂಗೋಲಿ ಸ್ಪರ್ಧೆ, ಸಾಯಂಕಾಲ 4.00 ಗಂಟೆಗೆ ಮ್ಯೂಜಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳನ್ನು ಎರಡು ವಿಭಾಗಗಳಲ್ಲಿಆಯೋಜಿಸಲಾಗುವುದು. ಸಂಪರ್ಕ ವಿವರ: ಕವಿ ಗೋಷ್ಠಿ ಜ್ಯೋತಿ ಕೋಟಗಿ-9980801993, ಸ್ನೇಹಲ್ ಪೂಜಾರಿ-9972674339, ಸುನೀತಾ ಪರಪ್ಪನವರ-9901399788
ಜಾನಪದ ಗೀತಗಾಯನ: ಜ್ಯೋತಿ ಕೋಟಗಿ-9980801993, ಸ್ನೇಹಲ್ ಪೂಜಾರಿ-9972674339 ರಂಗೋಲಿ ಸ್ಪರ್ಧೆ: ಸ್ನೇಹಲ್ ಪೂಜಾರಿ-9972674339, ರಂಜನಾ ಬುಲಬುಲೆ-9148028170 ಮ್ಯೂಜಿಕಲ್ ಚೇರ್: ಸುನೀತಾ ಪರಪ್ಪನವರ-9901399788, ಪ್ರೇಮಾ ಗಾಣಿಗೇರ- 9695951764 ಆಸಕ್ತರು ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸ ಕೊಳ್ಳಬಹುದಾಗಿದೆ ಎಂದು ಮಹಿಳಾ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ರೇಖಾ ಶೆಟ್ಟರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.