ದೀಪಾವಳಿ ಹಬ್ಬ: ಬೆಂಗಳೂರಿನಲ್ಲಿ ಹೂವು, ಹಣ್ಣು, ಅಲಂಕಾರ, ವಸ್ತುಗಳ ಖರೀದಿ ಭರಾಟೆ

Ravi Talawar
ದೀಪಾವಳಿ ಹಬ್ಬ: ಬೆಂಗಳೂರಿನಲ್ಲಿ ಹೂವು, ಹಣ್ಣು, ಅಲಂಕಾರ, ವಸ್ತುಗಳ ಖರೀದಿ ಭರಾಟೆ
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್​ 20: ದೀಪಾವಳಿ  ಹಬ್ಬ ಹಿನ್ನೆಲೆ ಹೂವು ಖರೀದಿಗೆ ಬೆಂಗಳೂರಿನ ಸಿಟಿ ಮಾರ್ಕೆಟ್​ಗೆ ಬೆಳ್ಳಂ ಬೆಳಗ್ಗೆ ಜನ ಸಾಗರವೇ ಹರಿದು ಬಂದಿದೆ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿ ಬಗೆ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿದ್ದು, ಸತತ ಮಳೆ ಹಿನ್ನೆಲೆ ಹೂವಿನ ದರದಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡು ಬಂದಿದೆ. ಜನದಟ್ಟಣೆ ಹಿನ್ನಲೆ ಕೆ.ಆರ್. ಮಾರ್ಕೆಟ್​, ಅವೆನ್ಯೂ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಅಪಾಯಕಾರಿಯಾಗಿ ಫ್ಲೈಓವರ್ ರಸ್ತೆ ಮೇಲೆ ಗ್ರಾಹಕರು ವಾಹನಗಳ ಪಾರ್ಕಿಂಗ್​ ಮಾಡಿ ತೆರಳಿದ ಪರಿಣಾಮ, ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

WhatsApp Group Join Now
Telegram Group Join Now
Share This Article