ಬಳ್ಳಾರಿ,ಅ.19.. ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿಯ ವತಿಯಿಂದ ಪಿಡಬ್ಲುಡಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಳ್ಳಾರಿ ನಗರದಿಂದ ತಾಳೂರಿಗೆ ಮಾರ್ಗ ಕಲ್ಪಿಸುವ ರಸ್ತೆಯು ಗುಡಾರ ನಗರದಿಂದ ಶ್ರೀಧರಗಡ್ಡೆ ಗ್ರಾಮದವರೆಗೆ ತುಂಬಾ ಹದಗೆಟ್ಟಿದ್ದು, ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ತೆಗ್ಗು-ದಿಣ್ಣೆಗಳನ್ನು ತಪ್ಪಿಸಲು ಹೋಗಿ ಹಲವಾರು ವಾಹನಗಳು ಅಪಘಾತಕ್ಕೆ ಒಳಗಾಗಿವೆ. ಇದು ನಿರಂತರ ೨ ವರ್ಷಗಳಿಂದಲೂ ಅವ್ಯವಸ್ಥೆ ಇದೆ. ಇದರ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನ ಆಗಿಲ್ಲ. ಹಾಗಾಗಿ ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿಯ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಎ.ದೇವದಾಸ್, ಸದಸ್ಯರುಗಳಾದ ಸೋಮಶೇಖರ ಗೌಡ, ಹನುಮಂತಪ್ಪ, ಜಗದೀಶ್ ನೇಮಕಲ್, ನಿಂಗರಾಜ. ಟಿ, ಪ್ರಮೋದ್ ಉಪಸ್ಥಿತರಿದ್ದರು.