ಸಂಡೂರು, ಅ.19. ಸಂಡೂರು ತಾಲೂಕಿನ ಹಿರಿಯ ಹಾಗೂ ಅನುಭವೀ ರಾಜಕಾರಣಿ ಎಚ್. ಲಕ್ಷ್ಮಣ ತುಮುಟಿ ಅವರಿಗೆ ಇತ್ತೀಚೆಗೆ ಕರ್ನಾಟಕ ರಾಜ್ಯ ಮೀನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (ಕೆ.ಎಸ್.ಎಂ.ಸಿ.ಎಲ್) ರಾಜ್ಯ ಉಪಾಧ್ಯಕ್ಷರ ಹುದ್ದೆ ಲಭಿಸಿರುವ ಹಿನ್ನೆಲೆಯಲ್ಲಿ ಅವರು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಬಳ್ಳಾರಿ ಹಾಗೂ ವಿಜಯನಗರ ಸಂಸದ ಈ. ತುಕಾರಾಂ ಮತ್ತು ಸಂಡೂರು ಶಾಸಕಿ ಅನ್ನಪೂರ್ಣ ಅವರಿಗೆ ಭೇಟಿಯಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್. ಲಕ್ಷ್ಮಣ ತುಮುಟಿ ಅವರು, “ನನ್ನ ರಾಜಕೀಯ ಜೀವನದಲ್ಲಿ ಈ ಹುದ್ದೆ ಒಂದು ಹೊಸ ಜವಾಬ್ದಾರಿ. ನನ್ನ ನೇಮಕದಲ್ಲಿ ಸಹಕಾರ ನೀಡಿದ ರಾಜ್ಯ ಸರ್ಕಾರ ಹಾಗೂ ಸಚಿವ ಸಂತೋಷ್ ಲಾಡ್ ರವರ ನಂಬಿಕೆಗೆ ತಕ್ಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ರಾಜ್ಯದ ಖನಿಜ ಸಂಪತ್ತಿನ ಸುಸೂತ್ರ ನಿರ್ವಹಣೆ ಹಾಗೂ ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ನನ್ನ ಮೊದಲ ಆದ್ಯತೆ” ಎಂದು ತಿಳಿಸಿದ್ದಾರೆ.
ಈ ಭೇಟಿಯ ವೇಳೆ ಸಂಡೂರು ಹಾಗೂ ಹೋಸಪೇಟೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಅವರು ತುಮುಟಿ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿ, ಮುಂದಿನ ಕಾರ್ಯಕ್ಕೆ ಶುಭಾಶಯ ಕೋರಿದರು.