ಬೆಳಗಾವಿ. ಜಿಲ್ಲಾ ಡಿ ಸಿ ಸಿ ಬ್ಯಾಂಕ ನಿರ್ದೆಶಕರ ಸ್ಥಾನಕ್ಕೆ ಹುಕ್ಕೇರಿ ಕ್ಷೇತ್ರದ ಚುನಾವಣೆಗೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೇರವು ಗೊಂಡ ಹಿನ್ನಲೆಯಲ್ಲಿ ಅಕ್ಟೋಬರ್ 19 ರಂದು ಹುಕ್ಕೇರಿ ಕ್ಷೇತ್ರದ ಚುನಾವಣೆ ಜರುಗಲಿದೆ.
ಕಾರ್ಮೊಡ ದಿಂದ ಕತ್ತಲಾಗಿದ್ದ ಹುಕ್ಕೇರಿ ಕ್ಷೇತ್ರದ ಬೆಳಗಾವಿ ಮದ್ಯವರ್ತಿ ಬ್ಯಾಂಕಿನ ಚುನಾವಣೆ ಅಕ್ಟೋಬರ್ 19 ರಂದು 7 ಸ್ಥಾನಗಳಿಗೆ ಮತದಾನ ಜರುಗಲಿದ್ದು ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು, ಆದರೆ ಹುಕ್ಕೇರಿ ಕ್ಷೇತ್ರದ ಮತದಾನ ಮುಂದೂಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಅಧಿಸೂಚನೆ ಹೋರಡಿಸಿದ್ದರು ಆದರೆ ಇಂದು ತಡೆಯಾಜ್ಞೆ ತೇರವು ಗೊಂಡ ಹಿನ್ನಲೆಯಲ್ಲಿ ಯಥಾ ಪ್ರಕಾರ ಚುನಾವಣೆ ಜರುಗಲಿದೆ.
ಹೌದು ಜಾರಕಿಹೋಳಿ ಮತ್ತು ಕತ್ತಿ ಕುಟುಂಬದ ನಡುವೆ ಭಾರಿ ಜಿದ್ದಾ ಜಿದ್ದಿನಿಂದ ಜರುಗಲಿರುವ ಬೆಳಗಾವಿ ಜಿಲ್ಲಾ ಮದ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣೆ ಈಗ ಮತ್ತೊಂದು ಹಂತ ತಲುಪಿದೆ, ಅಕ್ಟೋಬರ್ 19 ರಂದು ಏಳು ಸ್ಥಾನಗಳಿಗೆ ಮತದಾನ ನಡೆಯಬೆಕಿತ್ತು ಆದರೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶದ ಅನ್ವಯ ಹುಕ್ಕೇರಿ ಕ್ಷೇತ್ರದ ಗ್ರಾಮಿಣ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಕ್ಷೇತ್ರದ ಚುನಾವಣೆಗೆ ರೀಟ್ ಅರ್ಜಿ ಧಾಖಲಾದ ಕಾರಣ ಚುನಾವಣೆಯನ್ನು ಮುಂದಿನ ಆದೇಶದ ವರಗೆ ಮುಂದುಡಲು ನ್ಯಾಯಾಲಯ ಆದೇಶ ನೀಡಿದ್ದರು.
ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಹುಕ್ಕೇರಿ ಕ್ಷೇತ್ರದಲ್ಲಿ ಜಾರಕಿಹೋಳಿ ಮತ್ತು ಕತ್ತಿ ಗುಂಪಿನ ಚುನಾವಣಾ ಹಣಾಹಣಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು ಆದರೆ ಇಂದು ತಡೆಯಾಜ್ಞೆ ತೇರವು ಗೊಂಡ ಹಿನ್ನಲೆಯಲ್ಲಿ ಯಥಾ ಪ್ರಕಾರ ಅಕ್ಟೋಬರ್ 19 ರಂದು ಚುನಾವಣೆ ಜರುಗಲಿದೆ.ನ್ಯಾಯಾಲಯದ ಆದೇಶ ಬರುತ್ತಿದ್ದಂತೆ ಹುಕ್ಕೇರಿ ನ್ಯಾಯವಾದಿಗಳು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.