ತುಂಗಭದ್ರ ಜಲಾಶಯದಲ್ಲಿ ಹೂಳ ತೆರವಿಗೆ ತುಂಗಭದ್ರ ರೈತ ಸಂಘ ಒತ್ತಾಯ

Ravi Talawar
ತುಂಗಭದ್ರ ಜಲಾಶಯದಲ್ಲಿ ಹೂಳ ತೆರವಿಗೆ ತುಂಗಭದ್ರ ರೈತ ಸಂಘ ಒತ್ತಾಯ
WhatsApp Group Join Now
Telegram Group Join Now
ಬಳ್ಳಾರಿ,ಅ.18..: ತುಂಗಭದ್ರ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳನ್ನು (ಮಣ್ಣನ್ನು) ತೆಗೆಯಬೇಕೆಂದು ತುಂಗಭದ್ರ ರೈತ ಸಂಘ ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ, ಪ್ರಗತಿಪರ ರೈತರು ಹಾಗೂ ರೈತ ಪರ ಹಿರಿಯ ಹೋರಾಟಗಾರ ಡಾ||ದರೂರು ಪುರುಷೋತ್ತಮಗೌಡ ಮತ್ತು ಸಂಘದ ಪದಾಧಿಕಾರಿಗಳು, ತುಂಗಭದ್ರ ಜಲಾಶಯವನ್ನು ಅಂದಿನ ಮದ್ರಾಸ್ ಮತ್ತು ಹೈದರಾಬಾದ್ ಸರ್ಕಾರಗಳ ವತಿಯಿಂದ ೧೯೪೫ರಲ್ಲಿ ನಿರ್ಮಿಸಲಾಗಿದ್ದು, ೧೯೫೩ರಿಂದ ನೀರಾವರಿಗಾಗಿ ಡ್ಯಾಂನಿAದ ನೀರು ಬಿಡುಗಡೆ ಪ್ರಾರಂಭವಾಯಿತು.
ಈ ಜಲಾಶಯವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಇಂದಿನ ೯ ಜಿಲ್ಲೆಗಳ ಲಕ್ಷಾಂತರ ಎಕರೆ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಪ್ರಮುಖ ಜಲ ಮೂಲವಾಗಿದೆ. ಈ ಜಲಾಶಯದ ಮೂಲಕ ೧೬ ಲಕ್ಷ ಎಕರೆ ಕೃಷಿ ಭೂಮಿಗೆ ನೀರು ನೀಡಲಾಗುತ್ತಿದ್ದು, ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಮತ್ತು ಆಂಧ್ರಪ್ರದೇಶದ ಕರ್ನೂಲು, ಕಡಪಾ, ಅನಂತಪುರ ಹಾಗೂ ತೆಲಂಗಾಣದ ಗದ್ವಾಲ್, ಮೆಹಬೂಬನಗರ ಜಿಲ್ಲೆಗಳ ಕೃಷಿಗೆ ಮಾತ್ರವಲ್ಲದೆ, ಗ್ರಾಮೀಣ ಮತ್ತು ನಗರ ಜನತೆಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಜೊತೆಗೆ ಕೈಗಾರಿಕೆಗಳಿಗೆ ಸಹ ಸಹಾಯವಾಗುತ್ತಿದೆ.
ಈ ಜಲಾಶಯದ ಮೂಲ ಸಾಮರ್ಥ್ಯ ೧೩೩ ಟಿಎಂಸಿ ಆಗಿದ್ದು, ಈಗ ಹೂಳು ತುಂಬಿರುವುದರಿAದ ಸುಮಾರು ೩೩ ಟಿಎಂಸಿ ನೀರಿನ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದಾಗಿ ಪ್ರಸ್ತುತ ಇರುವುದು ಕೇವಲ ೧೦೦ ಟಿಎಂಸಿ ಮಾತ್ರ. ಇದರ ಪರಿಣಾಮವಾಗಿ ರೈತರಿಗೆ ಕೃಷಿಗಾಗಿ ಅಗತ್ಯವಿರುವ ನೀರು ದೊರಕುತ್ತಿಲ್ಲ. ಕುಡಿಯುವ ನೀರು ಹಾಗೂ ಕೈಗಾರಿಕಾ ಬಳಕೆಗೆ ಸಹ ತೀವ್ರ ಸಮಸ್ಯೆ ಉಂಟಾಗಿದೆ. ಜಿಂದಾಲ್ ಕಾರ್ಖಾನೆಗಳು ೨೦ ವರ್ಷಗಳ ಹಿಂದೆಯೇ ಕೃಷ್ಣಾ ಜಲಾಶಯ (ಅಲಮಟ್ಟಿ)ದಿಂದ ನೀರು ತಂದುಕೊಳ್ಳುವ ಪರಿಸ್ಥಿತಿಯಲ್ಲಿದ್ದವು. ಇದರಿಂದ ರೈತ¬ರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಸಮಸ್ಯೆಗಳು ಎದುರಾಗಬಹುದಾಗಿದೆ, ಆದ್ದರಿಂದ ಕೇಂದ್ರ ಜಲ ಆಯೋಗದ ಗಮನಕ್ಕೆ ತರುವಂತೆ ಮತ್ತು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಮಾವೇಶವನ್ನು ಕರೆದು, ತುಂಗಭದ್ರ ಜಲಾಶಯದಿಂದ ಹೂಳು ತೆಗೆದುಹಾಕಿ ಡ್ಯಾಂನ ಮೂಲ ಸಾಮ ರ್ಥ್ಯವಾದ ೧೩೩ ಟಿಎಂಸಿಗೆ ಪುನಃ ಪುನರ್‌ಸ್ಥಾಪನೆ ಮಾಡುವಂತೆ ಡಾ||ಪುರುಷೋತ್ತಮಗೌಡ ಮತ್ತಿತರರು ಒತ್ತಾಯಿಸಿದ್ದಾರೆ.
ಈ  ಸÀಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರರೆಡ್ಡಿ, ಬಿಜೆಪಿ ಬಳ್ಳಾರಿ ನಗರ ಘಟಕದ ಅಧ್ಯಕ್ಷ ಗರ‍್ರಂ ವೆಂಕಟರಮಣ ಸೇರಿದಂತೆ ಇನ್ನಿತರರು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಗೆ ಮನವಿ ಮಾಡಿದರು.
WhatsApp Group Join Now
Telegram Group Join Now
Share This Article