ಸರ್ವೋಚ್ಚ ನ್ಯಾಯಾಲಯದ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಅಥಣಿ ಬಂದ್,ಪ್ರತಿಭಟನೆ

Ravi Talawar
ಸರ್ವೋಚ್ಚ ನ್ಯಾಯಾಲಯದ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಅಥಣಿ ಬಂದ್,ಪ್ರತಿಭಟನೆ
WhatsApp Group Join Now
Telegram Group Join Now

ಅಥಣಿ: ಸರ್ವೋಚ್ಚ ನ್ಯಾಯಾಲಯದ ಸಿಜೆಐ ಗವಾಯಿ ಅವರಿಗೆ ಶೂ ಎಸೆದು ಅವಮಾನಿಸಿದ ಕಿಶೋರ್ ರಾಕೇಶ ಮತ್ತು ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ಮಾತುಗಳನ್ನಾಡಿದ ಅನಿಲ್ ಮಿಶ್ರಾ ವಿರುದ್ದ ಉಗ್ರ ಕ್ರಮ ಕೈಗೊಳ್ಳಬೇಕು ಮತ್ತೆ ಇಂತಹ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಳ್ಳಬೇಕು ಎಂದು ಮುಖಂಡ ಮಹಾಂತೇಶ ಬಾಡಗಿ ಹೇಳಿದರು

ಅಥಣಿ ಪಟ್ಟಣದಲ್ಲಿ ಗುರುವಾರ ವಿವಿಧ ಸಂಘಟನೆಗಳ ಮಹಾಒಕ್ಕೂಟದಿಂದ ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಕೇಂದ್ರ ಸರಕಾರದ ವಿರುದ್ದ ಘೋಷಣೇಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ತಹಶೀಲ್ದಾರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ಎಲ್ಲ ವ್ಯಾಪಾರಸ್ಥರು ಪ್ರತಿಭಟನೆ ಬೆಂಬಲಿಸಿ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಶೂ ಎಸೆದ ಆರೋಪಿ ವಿರುದ್ದ ದೇಶ ದ್ರೋಹ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕು ಮತ್ತು ಅಂಬೇಡಕರ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಅನೀಲ ಶರ್ಮಾ ಅವರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಈ ವೇಳೆ ಮಾತನಾಡಿದ ದಲಿತ ಮುಖಂಡರು ಮುಖ್ಯ ನ್ಯಾಯ ಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದಿದ್ದು ಇಡೀ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಅವಮಾನಗೊಳಿಸಿದಂತಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ. ಈ ಘಟನೆಗೆ ಕಾರಣವಾದ ವ್ಯಕ್ತಿಯನ್ನು ಶಿಕ್ಷಿಸಿ ಗಡಿಪಾರು ಮಾಡಬೇಕು. ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ಶೋಷಿತರನ್ನು ಇಂದಿಗೂ ಜಾತಿ ಮನಸ್ಥಿತಿಯಲ್ಲೇ ನೋಡುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ರಾಜೇಂದ್ರ ಐಹೋಳೆ, ನ್ಯಾಯವಾದಿಗಳಾದ ಎ ಎ ಹುದ್ದಾರ, ದಯಾನಂದ ವಾಘಮೋರೆ, ಸುಕುಮಾರ ಕಾಂಬಳೆ, ಸುನೀಲ ವಾಘಮೋರೆ, ಸುನೀಲ ಸಂಕ, ಕಲ್ಲಪ್ಪ ವನಜೋಳ ಮಾತನಾಡಿದರುಈ ವೇಳೆ ಅಪ್ಪಾಸಾಬ ಘಟಕಾಂಬಳೆ, ನಿಶಾಂತ ಮಡ್ಡಿ, ವಿನಾಯಕ ಕಾಂಬಳೆ, ಮಂಜೂ ನೂಲಿ, ಸುಧಾಕರ ಬೆಳ್ಳಂಕಿ, ಅಣ್ಣಪ್ಪ ಭಜಂತ್ರ, ಶಬ್ಬೀರ ಸಾತಬಚ್ಚೆ, ಸುಂದರ ಸೌದಾಗರ, ಬಸು ಗಾಡಿವಡ್ಡರ, ಅಸಲಂ ನಾಲಬಂದ, ಸೈಯದ ಅಮೀನ ಗದ್ಯಾಳ, ರೂಪಾ ಕಾಂಬಳೆ, ಜಯಶ್ರೀ ಕಾಂಬಳೆ,  ಸಿದ್ದಲಿಂಗ ಮಡ್ಡಿ, ಪ್ರಕಾಶ ಪಟ್ಟಣ, ರಾಮ ಮರಳರ, ಶಶಿ ಬಾಡಗಿ, ಮಂಜೂ ಹೋಳಿಕಟ್ಟಿ,ಸದಾಶಿವ ಕಾಂಬಳೆ ನಾರಾಯನ ಹೊನಕಾಂಡೆ, ಮಿತೇಶ ಪಟ್ಟಣ, ಆದರ್ಶ ಗಸ್ತಿ, ಕೋಮಲ ಕಾಂಬಳೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯರ್ತರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article