ಇಂದೋರ ನಗರದ ಮಾದರಿಯಲ್ಲಿ ಅಣ್ಣಿಗೇರಿ ಸ್ವಚ್ಚ ನಗರವನ್ನಾಗಿಸಲು ನಿರ್ಧಾರ: ಎನ್ ಎಚ್ ಕೂನರೆಡ್ಡಿ

Ravi Talawar
ಇಂದೋರ ನಗರದ ಮಾದರಿಯಲ್ಲಿ ಅಣ್ಣಿಗೇರಿ ಸ್ವಚ್ಚ ನಗರವನ್ನಾಗಿಸಲು ನಿರ್ಧಾರ:  ಎನ್ ಎಚ್ ಕೂನರೆಡ್ಡಿ
WhatsApp Group Join Now
Telegram Group Join Now
ಧಾರವಾಡ:  ಮಧ್ಯ ಪ್ರದೇಶದ ಇಂದೋರನ ನಗರಕ್ಕೆ ಅಣ್ಣಿಗೇರಿ ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಅದ್ಯಯನ ತಂಡದ  ನಿಯೋಗದೊಂದಿಗೆ ಸ್ಮಾರ್ಟ್ ಸಿಟಿ ಇಂದೋರ್ ಕಚೇರಿಯ ಸಭಾಭವನದ ಸಭೆಯಲ್ಲಿ ಮಾತನಾಡಿದ ಅವರು ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಅಣ್ಣಿಗೇರಿ ಪುರಸಭೆಯ ಸಮಗ್ರ ಅಭಿವೃದ್ಧಿ ಕುರಿತು ಹಮ್ಮಿಕೊಳ್ಳಲಾದ ತರಬೇತಿ ಪ್ರವಾಸದಲ್ಲಿ ವೀಕ್ಷಿಸಿ ಮೂಲದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಸಂಗ್ರಹಣೆ ಬಗ್ಗೆ ಪ್ರತ್ಯಕ್ಷ ಸಾರ್ವಜನಿಕರೊಂದಿಗೆ ವಿಚಾರಿಸಿ ಅವರ ಅನುಭವಗಳನ್ನು ತಿಳಿದುಕೊಳ್ಳಲಾಯಿತು. ಹಾಗೂ ನಮ್ಮೊಂದಿಗೆ ಹಾಜರಿದ್ದು ಎಲ್ಲ ಉತ್ತಮ ಪದ್ಧತಿಗಳ ಬಗ್ಗೆ ವೀಕ್ಷಿಸಲಾಯಿತು.
 ಬಯೋ ಗೋವರ್ಧನ್ ಪ್ಲಾಂಟ್ಗೆ ಭೇಟಿ ನೀಡಿ ಇಂದೋರನಲ್ಲಿ ಪ್ರತಿ ದಿನ ಸುಮಾರು 500 ರಿಂದ್ 550 ಟನ್ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುದನ್ನು ವೀಕ್ಷಿಸಲಾಯಿತು. ಒಣ ಕಸ ವಿಲೇವಾರಿ ಘಟಕ್ಕೆ ತೆರಳಿ NEPRA Resources management Ltd ಇವರಿಂದ ಮಾಹಿತಿ ಪಡೆದು ಕೊಂಡರು. ನಗರ ಪಾಲಿಕೆಯಿಂದ ನಿರ್ವಹಿಸುತ್ತಿರುವ ವಾಹನಗಳ ಮೇಲ್ವಿಚಾರಣೆ ಬಗ್ಗೆ GPS ಆಧಾರಿತ intigrated command control ಸೆಂಟರ್ಗಳ ಬಗ್ಗೆಯೂ ಮಾಹಿತಿ ಪಡೆಯಲಾಯಿತು. ಇಂದೋರ ನಗರದ ಒಳ ಚರಂಡಿ ನೀರನ್ನು ಶುದ್ಧಿಕರಣ ಮಾಡುವ STP ಘಟಕಕ್ಕೆ ಭೇಟಿ ನೀಡಿ ಇಲ್ಲಿನ 245 MLD ಸಾಮರ್ಥ್ಯದ ಪ್ಲಾಂಟ್ ವೀಕ್ಷಣೆಮಾಡಲಾಯಿತು.
 ಇಂದೋರ್ ನಗರದಲ್ಲಿನ ಕೋಳಚೆ ಪ್ರದೇಶದಲ್ಲಿ ಹಾದು ಹೋಗುವ ಖಾನ ನದಿಗೆ ರಿವರ್ ಫ್ರಂಟ್ ಅಭಿವೃದ್ಧಿ ಪಡಿಸಿದ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅದರಂತೆ ನವಲಗುಂದ ತಾಲೂಕಿನ ಯಮನೂರ ಗ್ರಾಮದ  ರಾಜಾ ಬಾಗಸವರ  ಚಾಂಗ ದೇವರ ಜಾತ್ರೆಗೆ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಪವಿತ್ರ ಬೆಣ್ಣೆ   ಹಳ್ಳದಲ್ಲಿ ಸ್ನಾನ ಮಾಡಿದರೆ ಮನುಷ್ಯನ ದೇಹಕ್ಕೆ ಯಾವುದೇ ಚರ್ಮ ರೋಗ ಬರುವುದಿಲ್ಲವೆಂಬ ನಂಬಿಕೆಯ ಭಾವೈಕ್ಯತಾ ಕೇಂದ್ರವಾಗಿದೆ.
 ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಪಡೆದು “ಬೆಣ್ಣಿ ಹಳ್ಳ ಆರತಿ” ಅಭಿವೃದ್ಧಿ ಕಾಮಗಾರಿ ಮೆಟ್ಟಿಲು ಹಾಗೂ ಸ್ನಾನ ಮಾಡಲು 25 ಕೋಟಿ ಅನುದಾದಲ್ಲಿ ಆಧುನಿಕ ಪದ್ಧತಿಯಲ್ಲಿ ಕಾಮಗಾರಿಯನ್ನು ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಒಂದು ತಿಂಗಳಲ್ಲಿ ಪ್ರಾರಂಭಿಸಲು  ನಿರ್ಧರಿಸಿದ್ದೇನೆ.  ಇಂದೋರ್ ನಗರದಲ್ಲಿ ಸ್ವಚ್ಚತೆಗೆ ತೆಗೆದುಕೊಂಡಿರುವ ವಿವಿಧ ಯೋಜನೆಗಳನ್ನು ಅಣ್ಣಿಗೇರಿ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ನಗರ ಸ್ವಚ್ಚತೆಗಾಗಿ ಪುರಸಭೆ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಶ್ರಮೀಸುವುದಾಗಿ ಕೋನರಡ್ಡಿ ಹೇಳಿದರು.
 ಈ ಸಂದರ್ಭದಲ್ಲಿ ಇಂದೋರ್ ಸ್ಮಾರ್ಟ್ ಸಿಟಿ ಸಿಇಓ ಹಾಗೂ ಅಡಿಷನಲ್ ಕಮಿಷನರ್ ಅರ್ಥ ಜೈನ (IAS), ಡೆಪ್ಯೂಟಿ ಕಮಿಷನರ್ ಸ್ವಚ್ಛ ಭಾರತ ಮಿಷನ್ (SBM) ಶೈಲೇಶ್ ಅವಸ್ತಿ, ಅಭಿಯಂತರರಾದ ಪ್ರತೀಕ, ಪ್ರಾಜೆಕ್ಟ್ ಇನ್ ಚಾರ್ಜ್ ಗುಲಾಬಸಿಂಗ್ ನಗರ್, ಪ್ರಾಜೆಕ್ಟ್ ಮ್ಯಾನೇಜರ್ ವೀರೇಂದ್ರ ಸ್ವಾಮಿ, ಪ್ರಾಜೆಕ್ಟ್ ಮ್ಯಾನೇಜರ್ ಸುಮಿತ್ ಯಾದವ, ಅಧಿಕಾರಿ ಯೋಗೇಂದ್ರ ದೀಕ್ಷಿತ್, ಮೇಲ್ವಿಚಾರಕ ಅಧಿಕಾರಿ ಪುಷ್ಪರಾಜ್ ಶುಕ್ಲ ಇವರು ಇಂದೋರ್ ನಗರದಲ್ಲಿ ಅಭಿವೃದ್ಧಿ ಪಡಿಸಿದ ವಿವಿಧ ಹೊಸ ಯೋಜನೆಗಳ ಕುರಿತು ನಮ್ಮ ತಂಡಕ್ಕೆ ಮಾಹಿತಿಯನ್ನು ನೀಡಿದರು.
ಎನ್.ಹೆಚ್.‌ ಕೋನರಡ್ಡಿ ಅವರಿಗೆ ಸನ್ಮಾನ :
 ಇಂದೋರ ನಗರದ ಅಧಿಕಾರಿಗಳಿಂದ ಹಾಗೂ ಅಣ್ಣಿಗೇರಿ ಪುರಸಭೆಯ ಸರ್ವ ಸದಸ್ಯರುಗಳನ್ನು ಇಂದೋರ ನಗರಕ್ಕೆ ಕರೆದುಕೊಂಡು ಹೋಗಿ ಒಳ್ಳೆಯ ನಗರವನ್ನು ವೀಕ್ಷಣೆ ಮಾಡಿಸಿರುವದು ಅತೀವ ಸಂತೋಷವಾಗಿದೆ ಎಂದು ನವಲಗುಂದ ಶಾಸಕ ಎನ್.ಹೆಚ್.‌ ಕೋನರಡ್ಡಿ ಅವರಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು. ಇಂದೋರ ನಗಲ್ಲಿರುವ ನಮ್ಮ ಮಜ್ಜಿಗುಡ್ಡ ಗ್ರಾಮದ ಖಾಸಗಿ ಕಂಪನಿಯಲ್ಲಿ ರಿಜನಲ್‌ ಮ್ಯಾನೇಜರ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿರೇಶ ಕೆಂಭಾವಿ ಅವರು ಶಾಸಕರಿಗೆ ಅಭಿನಂದಿಸಿರುವದು ಕೂಡ ಕ್ಷೇತ್ರದ ಅಭಿಮಾನ ಹೆಚ್ಚಿಸುವಂತಿತ್ತು.
 ಈ ನಿಯೋಗದಲ್ಲಿ ಅಣ್ಣಿಗೇರಿ ಪುರಸಭೆಯ ಅದ್ಯಕ್ಷ ಶಿವಾನಂದ ವಾಯ್. ಬೆಳಹಾರ, ಉಪಾಧ್ಯಕ್ಷ ನಾಗಪ್ಪ ಪರಸಪ್ಪಾ ದಳವಾಯಿ, ಸ್ಥಾಯಿ ಸಮಿತಿ ಚೇರಮನರುಗಳಾದ  ತಿಪ್ಪಣ್ಣಾ (ಮುದಕಣ್ಣ) ಯಮನಪ್ಪ ಕೊರವರ, ಶ್ರೀಮತಿ ನೀಲವ್ವ ಲಿಂಗನಗೌಡ ಕುರಹಟ್ಟಿ, ಅಮೀನಾಬೇಗಂ ಟಿಪ್ಪುಸುಲ್ತಾನ ಬಾರಿಗಿಡದ ಹಾಗೂ ಸದಸ್ಯರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article