ಘಟಪ್ರಭಾ: ದಿನಾಂಕ 17-10-2025 ರಂದು ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ” ಹತ್ತರಗಿ ಟೊಲ್ ದವರಿಗೆ 60 % ಪರ್ಸೆಂಟ್ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಬೇಕು, ಹಾಗೂ ಟೋಲ್ ದಲ್ಲಿ ಕನ್ನಡವನ್ನು ಮಾತನಾಡಿ ಪ್ರಯಾಣಿಕರ ಜೊತೆ ಸಹಕರಿಸಬೇಕೆಂದು ಸಂಘಟನೆ ವತಿಯಿಂದ ಮನವಿ ಕೊಡಲಾಯಿತು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ, ಮೂಡಲಗಿ ತಾಲೂಕ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಅರಭಾವಿ, ಮೂಡಲಗಿ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ರಾಘವೇಂದ್ರ ಕುಡ್ಡಮ್ಮಿ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ಗೋಕಾಕ್ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕಾನೂನು ಸಲಹೆಗಾರಾದ ಎಂ ಐ ಕೋತ್ವಾಲ್, ಸುರೇಶ್ ಚಿಗಡೊಳ್ಳಿ, ಯಲ್ಲಪ್ಪ ಅಟ್ಟಿಮಟ್ಟಿ, ಕಾಶಪ್ಪ ನಿಂಗನ್ನವರ್, ವಿಠ್ಠಲ್ ಬೆಳಗಲಿ, ಬೀಮಶಿ ಬೆಳಗಲಿ, ಮಂಜು ಪಾಟೀಲ್, ಶಂಕರ್ ಮೆಳವಂಕಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.