ವಿಮಾನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೊಂದು ವಿಮಾನ ಪತನವಾಗಿದೆ. ಅಮೆರಿಕದ ಮಿಚಿಗನ್ ನ ಬಾತ್ ಟೌನ್ಶಿಪ್ನಲ್ಲಿ ಗುರುವಾರ ಸಂಜೆ ಸಣ್ಣ ವಿಮಾನವೊಂದು ಪತನಗೊಂಡು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತ ಕ್ಲಾರ್ಕ್ ಮತ್ತು ಪೀಕಾಕ್ ರಸ್ತೆಗಳ ಬಳಿ ಸಂಭವಿಸಿದ್ದು, ಸ್ಥಳೀಯ ಸಮಯ ಪ್ರಕಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ವಿಮಾನದಲ್ಲಿ ಮೂವರು ಜನರಿದ್ದು, ಅವರೆಲ್ಲರೂ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ವಿಮಾನ ಅಪಘಾತದಲ್ಲಿ ಮೃತಪಟ್ಟ ಮೃತರ ಹೆಸರುಗಳು ಮತ್ತು ವಯಸ್ಸುಗಳ ಮಾಹಿತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆ ಆರಂಭಿಸಿದ್ದು, ಅಪಘಾತದ ಕಾರಣ ಮತ್ತು ವಿಮಾನದ ಗಮ್ಯಸ್ಥಾನ ಇನ್ನೂ ಸ್ಪಷ್ಟವಾಗಿಲ್ಲ.
ಈ ವಿಮಾನ ಅಪಘಾತ ಮೈಲ್ ಪೂರ್ವಕ್ಕೆ ಮಿಚಿಗನ್ನ ಕ್ಯಾಪಿಟಲ್ ರೀಜನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 15 ಮೈಲು ದೂರದಲ್ಲಿದ್ದು, ಸ್ಥಳೀಯ ಪೊಲೀಸ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ತುರ್ತು ಸೇವೆಯ ವಾಹನಗಳು, ಅಗ್ನಿಶಾಮಕ ದಳದ ಟ್ರಕ್ಗಳು ಮತ್ತು ಕನಿಷ್ಠ ಒಂದು ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿತು.