ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ

Ravi Talawar
ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಯರಗಟ್ಟಿ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ನೇತೃತ್ವದಲ್ಲಿ ಜರುಗಿತು.

ಬ್ರಿಟಿಷರ ವಿರುದ್ಧ ಯುದ್ದದಲ್ಲಿ ಅವಸ್ಮರಣೀಯ ವಿಜಯ ಸಾಧಿಸಿದ ಕಿತ್ತೂರು ಕಲಿಗಳ ನೆನಪಿಗಾಗಿ ಕಿತ್ತೂರು ಉತ್ಸವ ಆಚರಣೆ ಮಾಡಲಾಗುತ್ತದೆ ಆದರಿಂದ ಶನಿವಾರ ದಿ.೧೮-೧೦-೨೦೨೫ರಂದು ಸಂಜೆ ೦೫-೦೦ ಗಂಟೆಗೆ ಯರಗಟ್ಟಿ ಪಟ್ಟಣಕ್ಕೆ ಕಿತ್ತೂರು ಉತ್ಸವದ ಜ್ಯೋತಿಯಾತ್ರೆ ಆಗಮಿಸಲಿದ್ದೆ ಎಂದು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ತಿಳಿಸಿದರು.

ಈ ವೇಳೆ ಮಾಜಿ ತಾ. ಪಂ. ಅಧ್ಯಕ್ಷ ಶಿವಕುಮಾರ ದೇಸಾಯಿ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪಶು ವೈದ್ಯಾಧಿಕಾರಿ ಎಂ. ವ್ಹಿ. ಪಾಟೀಲ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಎಎ??? ವಾಯ್. ಎಂ. ಕಡಕೋಳ, ಕಂದಾಯ ನಿರೀಕ್ಷಕ ವಾಯ್ ಎಫ್ ಮುರ್ತೇಣ್ಣವರ, ಗ್ರಾಮ ಆಡಳಿತಾಧಿಕಾರಿ ಎಲ್. ಡಿ. ದಳವಾಯಿ, ಈರಣ್ಣಾ ಮುದ್ದಾನಿ, ಶಿವಾನಂದ ಬಳಿಗಾರ, ರಾಜೇಂದ್ರ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article