ಅಥಣಿ : ಭಾರತದ ಹೆಮ್ಮೆಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಮ್ಮ ದೇಶ ಮತ್ತು ಪ್ರಪಂಚದ ಕಂಡ ಮಹಾನ್ ವಿಜ್ಞಾನಿ “ಮಿಸೈಲ್ ಮೆನ್” ಎಂದೇ ಖ್ಯಾತಿ ಪಡೆದಿದ್ದರು ಎಂದು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಹೇಳಿದರು.
ಅವರು ಅಥಣಿ ಪಟ್ಟಣದ ಡಾ. ಎಪಿಜೆ ಅಬ್ದುಲ್ ಕಲಾಂ ವೃತ್ತದಲ್ಲಿ ಅಥಣಿ ತಾಲೂಕಾ ಮೈನಾರಿಟಿ ಸೋಷಿಯಲ್ ಆಂಡ್ ವೆಲ್ಫೇರ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲಾಂ ಅವರ 94ನೇ ಜಯಂತಿ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸರಳತೆ, ಪ್ರಾಮಾಣಿಕತೆ, ಮೇರು ವ್ಯಕ್ತಿತ್ವದ ದೇಶಪ್ರೇಮಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎನಿಸಿಕೊಂಡಿದ್ದ ಕಲಾಂ ಅವರು ನಮ್ಮ ದೇಶದ ವಿಜ್ಞಾನಿಗಳಾಗಿ, ರಾಷ್ಟ್ರಪತಿಗಳಾಗಿ ಅನೇಕ ವೈಜ್ಞಾನಿಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವು ನೀವೆಲ್ಲರೂ ಸೇವೆಯನ್ನು ಮಾಡುವ ಮೂಲಕ ಅಪ್ಪಟ ದೇಶ ಪ್ರೇಮಿಗಳಾಗಬೇಕು. ಅವರ ಬದುಕಿನ ಮೌಲ್ಯಗಳು, ಸರಳ ಸಜ್ಜನಿಕಿಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಅವರು ತಮ್ಮ ಇಡೀ ಜೀವನವನ್ನು ಭಾರತ ದೇಶದ ಏಳಿಗೆಗೆ ಮುಡಿಪಾಗಿಟ್ಟರು. ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕು ಎಂದು ಅಭಿಪ್ರಾಯಪಟ್ಟರು
ಆನಂತರ ಅಥಣಿ ತಾಲೂಕಾ ಮೈನಾರಿಟಿ ಸೋಷಿಯಲ್ ಆಂಡ್ ವೆಲ್ಫೇರ್ ಕಮಿಟಿ ತಾಲೂಕಾ ಅಧ್ಯಕ್ಷ ಅಯಾಜ್ ಮಾಸ್ಟರ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಅಬ್ದುಲ್ ಕಲಾಂ ಅವರು ಬಡತನದಲ್ಲಿ ಜೀವನ ನಡೆಸಿ, ತಮ್ಮ ಜ್ಞಾನ
ಕೌಶಲ್ಯದಿಂದ ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಉನ್ನತ ಕೊಡುಗೆ ನೀಡಿದ್ದಾರೆ ಎಂದು ಅವರು ತಮ್ಮ ಜೀವನದಲ್ಲಿ ವೈಯಕ್ತಿಕ ಗಳಿಕೆಯ ಬಗ್ಗೆ ಯೋಚಿಸದೆ, ನಾನು ದೇಶಕ್ಕಾಗಿ ಏನು ಮಾಡಬೇಕು ಎಂಬ ಒಂದೇ ವಿಚಾರವನ್ನು ಇಟ್ಟುಕೊಂಡು, ಕೊನೆಗೆ ದೇಶಕ್ಕೆ ಕ್ಷಿಪಣಿಗಳನ್ನು ನೀಡುವಲ್ಲಿ ಯಶಸ್ವಿಯಾದರು. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುರಸಭೆಯವರು ವೃತ್ತದ ನಾಮಕರಣಕ್ಕೆ ಸಹಕಾರ ನೀಡಬೇಕು. ಮುಂದಿನ ದಿನಮಾನಗಳಲ್ಲಿ ಸ್ಥಾಳಾವಕಾಶ ಸಿಕ್ಕರೆ ಉದ್ಯಾನವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.
ಪುರಸಭೆ ಸದಸ್ಯ ರಾವಸಾಬ ಐಹೊಳೆ ಮಾತನಾಡಿ, ಎ.ಪಿ.ಜೆ. ಅಬ್ದುಲ ಕಲಾಂ ಅವರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ಜಾತ್ಯತೀತ ಹಾಗೂ ಪಕ್ಷಾತೀತ ನಾಯಕರಾಗಿದ್ದರು. ದೇಶದ ಎಲ್ಲಾ ರಾಷ್ಟ್ರಪತಿಗಳಲ್ಲಿ ಡಾ. ಅಬ್ದುಲ್ ಕಲಾಂ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಮಲ್ಲಿಕಾರ್ಜುನ ಬುಟಾಳಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸೈಯ್ಯದಅಮೀನ ಗದ್ಯಾಳ. ರಿಯಾಜ್ ಸನದಿ. ಪ್ರಮೋದ ಬಿಳ್ಳೂರ. ಕನ್ನಡಪರ ಹೋರಾಟಗಾರರಾದ ಅಣ್ಣಾಸಾಬ ತೆಲಸಂಗ. ಶಬ್ಬೀರ್ ಸಾತಬಚ್ಚೆ. ನ್ಯಾಯವಾದಿ ಮಿತೇಶ ಪಟ್ಟಣ. ಮುಖಂಡರಾದ ಅಸ್ಲಮ್ ನಾಲಬಂದ. ಆಬೀದ ಮಾಸ್ಟರ್. ಸೈಯ್ಯದ್ ಗಡ್ಡೇಕರ. ಬಾಬು ಖೇಮಲಾಪುರ. ಇಸ್ರತ್ ಗದ್ಯಾಳ. ಸಲೀಮ್ ಅರಟಾಳ. ಮಹಾಂತೇಶ ಬಾಡಗಿ. ಬೀರಪ್ಪ ಯಕಂಚ್ಚಿ. ಸೋಹೆಲ್ ಕಾಜಿ. ಗುಲಾಬ ನಾಲಬಂದ. ಡಾ. ಸಾದೀಕ್ ಗಲಗಲಿ. ಶೌಕತ್ ಮುಕ್ಕೇರಿ. ಸೋಹೆಲ್ ಕಿರಣಗಿ. ಶಿರಾಜ ಸನದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು ಶಿಕ್ಷಕ
ಅಜಹರ ಮುಲ್ಲಾ ನಿರೂಪಿಸಿ. ವಂದಿಸಿದರು.