ಬಳ್ಳಾರಿ: ‘16..ಆತ್ಮ ನಿರ್ಭರ ಭಾರತ – ಸಂಕಲ್ಪ ಅಭಿಯಾನ’’ ಘರ್ ಸ್ವದೇಶಿ’’ ಎಂಬ ಘೋಷವಾಕ್ಯದಡಿ ರಾಜ್ಯದಾದ್ಯಂತ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ, ಜಿಲ್ಲೆ ಮತ್ತು ಮಂಡಲ ಮಟ್ಟಗಳಲ್ಲಿ ಕಾರ್ಯಾಗಾರಗಳು, ಮಹಿಳಾ ಮತ್ತು ಯುವ ಸಮ್ಮೇಳನಗಳು, ಸ್ವದೇಶಿ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆಗಳು, ರಥಯಾತ್ರೆ, ಪಾದಯಾತ್ರೆ, ಸ್ವದೇಶಿ ಮೇಳಗಳು, ಬೀದಿ ನಾಟಕಗಳು ಹಾಗೂ ಗೋಡೆ ಬರಹಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ತಿಳಿಸಿದರು.
ನಗರದ ಮೋಕಾ ರಸ್ತೆಯ ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರ ದೃಷ್ಟಿಕೋನ ಆಲೋಚನೆಯಾಗಿದೆ. ಈ ಅಭಿಯಾನವು ಸಾಮಾನ್ಯ ನಾಗರಿಕರ ಪಾಲ್ಗೊಳ್ಳುವಿಕೆ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬ ಭಾರತೀಯನಿಗೂ ಆತ್ಮ ನಿರ್ಭರ ಸಂದೇಶ ತಲುಪಿಸಿ ರಾಷ್ಟ್ರೀಯ ಚಿಂತನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡವುದಾಗಿದೆ.
ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವುದರ ಮೂಲಕ ರಾಷ್ಟ್ರದ ಆರ್ಥಿಕ ಸ್ಥಿತಿ ಮತ್ತು ಸಾಂಸ್ಕೃತಿಕತೆಗೆ ಶಕ್ತಿ ತುಂಬುತ್ತೇವೆ ರಾಜ್ಯಮಟ್ಟದಲ್ಲಿ ಹಲವು ಚಟುವಟಿಕೆಗಳು ಹಮ್ಮಿಕೊಂಡಿದ್ದು ಕಾರ್ಯಗಾರಗಳ ಮುಖಾಂತರ ಕಾರ್ಯಕರ್ತರಿಗೆ ತರಬೇತಿ ನೀಡುವುದು. ಭಾಷಣಕಾರರ ವರ್ಗಗಳು ಪತ್ರಿಕಾಗೋಷ್ಠಿಗಳು ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಸ್ವದೇಶಿ ಆನ್ಲೈನ್ ಕ್ವಿಜ್ ಸ್ಪರ್ಧೆ, ಸ್ವದೇಶಿ ಬಗ್ಗೆ ಸೋಶಿಯಲ್ ಮೀಡಿಯಾ ರಿಲ್ಸ್ ಸ್ಪರ್ಧೆ ಆತ್ಮ ನಿರ್ಭರ್ ಭಾರತ ಪ್ರಬಂಧ ಸ್ಪರ್ಧೆ, ಆತ್ಮ ನಿರ್ಭರ್ ಭಾರತ ಭಾಷಣ ಸ್ಪರ್ಧೆ ಇನ್ನು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ದೀಪಾವಳಿ ಹಬ್ಬದ ಸಮಯದಲ್ಲಿ “ಸ್ವದೇಶಿ ವಸ್ತುಗಳನ್ನು ಮಾತ್ರ ಖರೀದಿಸೋಣ’’ ಎಂಬ ಸಂದೇಶದೊAದಿಗೆ ವಿಶೇಷ ಜಾಗೃತಿ ಅಭಿಯಾನ ನಡೆಯಲಿದೆ. ಅಭಿಯಾನವು “ಮೇಡ್ ಇನ್ ಇಂಡಿಯಾ” ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ, ಸ್ಥಳೀಯ ಕೈಗಾ¬ರಿಕೆಗಳಿಗೆ ಶಕ್ತಿ ತುಂಬುವ ಉದ್ದೇಶ ಹೊಂದಿದೆ ಎಂದರು.
ಬಹು ಮುಖ್ಯವಾಗಿ ಮನೆಮನೆ ಸಂಪರ್ಕವನ್ನು ಮಾಡಿ ಸ್ವದೇಶಿ ಉತ್ಪನ್ನಗಳ ಉಪಯೋಗಿಸುವುದರೊಂದಿಗೆ ಪ್ರತಿ ಮನೆಮನೆಯು ಸ್ವದೇಶಿ ಮನೆ ಯಾಗಬೇಕು ಈ ಬಗ್ಗೆ ಜನಜಾಗೃತಿಯನ್ನು ಇಡೀ ರಾಜ್ಯದಂತ ನಡೆಸಲಾಗುತ್ತದೆ. ಸ್ವದೇಶಿ ಎನ್ನುವುದು ನಮ್ಮ ಜೀವನದ ಭಾಗವಾಗಬೇಕು ನಾವು ಕೊಂಡುಕೊಳ್ಳುವ ವಸ್ತುಗಳಲ್ಲಿ ೫೦% ವಸ್ತುಗಳು ವಿದೇಶದಲ್ಲಿ ಉತ್ಪನ್ನದವಾದಂತಹ ವಸ್ತುಗಳಾಗಿವೆ. ಸ್ವದೇಶಿ ಉತ್ಪನ್ನ ಬಳಸಿದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಜೊತೆಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು. ಇಂದಿನ ಯುವ ಜನತೆ ಕಾರ್ಮಿಕರಿಗೆ ಪ್ರೋತ್ಸಾಹ ನೀಡಬೇಕು. ಆನ್ಲೈನಿಂದ ಕಾರ್ಮಿಕರ ಸ್ವದೇಶಿ ವಸ್ತುಗಳನ್ನ ಪ್ರಚಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು. ವಿವಿಧ ದೇಶಗಳಿಗೆ ನಮ್ಮ ದೇಶದ ಸ್ವದೇಶ ಉತ್ಪನ್ನಗಳು ರವಾನಿಯಾಗುತ್ತಿವೆ ಸ್ಥಳೀಯ ಉತ್ಪನ್ನ ಬೆಳೆಸಿ ಉಳಿಸಿ ಬೆಳೆಸಬೇಕಾದ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಘಟಕದಿಂದ ಪ್ರತಿ ಮನೆಯೂ ಸ್ವದೇಶಿ, ಮನೆ-ಮನೆಯೂ ಸ್ವದೇಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಕೋನದ ಭಾಗವಾಗಿ ದೇಶದಾದ್ಯಂತ ನಡೆಯುತ್ತಿದೆ. ಸೆ.೨೫ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನದಂದು ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಡಿ.೨೫ರಂದು ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದಂದು ಸಮಾರೋಪಗೊಳ್ಳಲಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನಾಯ್ಡು ಮೋಕಾ ಮಾತನಾಡಿ, ನಮ್ಮ ಸ್ವದೇಶ ಉತ್ಪನ್ನಗಳು ನಮ್ಮ ಅಡುಗೆಮನೆಯಿಂದ ಚಳುವಳಿ ಆರಂಭವಾಗಬೇಕು. ಒಂದೊAದು ವಿಧಾನಸಭಾ ಕ್ಷೇತ್ರದಿಂದ ಅ.೨೫ರಿಂದ ೨೫,೦೦೦ ಸ್ಟಿಕ್ಕರ್ಗಳ ಅಂಟಿಸುವ ಕೆಲಸವಾಗುತ್ತದೆ. ಮನೆಮನೆಗೆ ನಮ್ಮ ಕಾರ್ಯಕರ್ತರು ತೆರಳಿ ಸ್ವದೇಶಿ ಚಿಂತನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಕ್ವಿಜ್ ಸ್ಪರ್ಧೆ, ಸಹಿ ಸಂಗ್ರಹ ಕೂಡಾ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಡಾ||ಬಿ.ಕೆ.ಸುಂದರ್, ಬಿಜೆಪಿ ಬಳ್ಳಾರಿ ನಗರ ಘಟಕದ ಅಧ್ಯಕ್ಷ ಗರ್ರಂ ವೆಂಕಟರಮಣ, ಮುಖಂಡರಾದ ಎಸ್.ಗುರುಲಿಂಗನಗೌಡ, ಹೆಚ್.ಹನುಮಂತಪ್ಪ, ಕೆ.ಎಸ್.ದಿವಾಕರ್, ರ್ರಿಂಗಳಿ ತಿಮ್ಮಾರೆಡ್ಡಿ, ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವರಾಯನಕೋಟೆ ಸೋಮನಗೌಡ, ಅಮರ್, ನಗರಸಭೆಯ ಮಾಜಿ ಉಪಾಧ್ಯಕ್ಷ ರಾಮಚಂದ್ರಪ್ಪ, ಪುಷ್ಪ ಚಂದ್ರಶೇಖರ್, ರಾಮಾಂಜಿನಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.