ಬೆಳಗಾವಿ: ವೃತ್ತಿಯಿಂದ ಶಿಕ್ಷಕರಾಗಿದ್ದರೂ ಪ್ರವೃತ್ತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಮಾಸ್ತಮರ್ಡಿ ಶಾಲೆಯ ಶಿಕ್ಷಕ ಬಸವರಾಜ ಸುಣಗಾರ ಅವರು ಅನಾರೋಗ್ಯದ ಹಿನ್ನೆಲೆ ಬುಧವಾರ ಅಸುನೀಗಿದರು. ಮೂಲತಃ ಹಣ್ಣೀಕೇರಿಯವರಾದ 57 ವರ್ಷದ ಸುಣಗಾರ ಅವರು ತಮ್ಮ ಕುಟುಂಬ ಸೇರಿದಂತೆ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಗುರುವಾರ ಅವರ ಅಂತ್ಯಕ್ರಿಯೆ ಬೆನ್ನಲ್ಲೇ ಬೆಳಗಾವಿ ಪತ್ರಕರ್ತರು ಮತ್ತು ಬರಹಗಾರರ ಬಳಗ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.
ಹಸಿರುಕ್ರಾಂತಿ ಕಾರ್ಯಾಲಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸಂಪಾದಕರಾದ ವಿಜಯಕುಮಾರ ಮುಚಳಂಗಿ, ಸಂಪತ್‌ಕುಮಾರ ಮುಚಳಂಬಿ, ಸಾಹಿತಿಗಳಾದ ಸ.ರಾ.ಸುಳಕೊಡೆ, ಜಲತ್ಕುಮಾರ್ ಪುಣಜಗೌಡ, ಎಂ.ವೈ ಮೆಣಸಿನಕಾಯಿ ಹಾಗೂ ಹಸಿರುಕ್ರಾಂತಿ ಸಿಬ್ಬಂದಿ ಉಪಸ್ಥಿತರಿದ್ದರು.