ಮದ್ಯ ಮಾರಾಟ ಹೆಚ್ಚಳಕ್ಕೆ ಬಾರ್‌ ಮಾಲೀಕರ ಮೇಲೆ ಅಬಕಾರಿ ಇಲಾಖೆ ಒತ್ತಡ

Ravi Talawar
ಮದ್ಯ ಮಾರಾಟ ಹೆಚ್ಚಳಕ್ಕೆ ಬಾರ್‌ ಮಾಲೀಕರ ಮೇಲೆ ಅಬಕಾರಿ ಇಲಾಖೆ ಒತ್ತಡ
WhatsApp Group Join Now
Telegram Group Join Now

ಚಾಮರಾಜನಗರ, ಅಕ್ಟೋಬರ್ 16: ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರ  ಪಂಚ ಗ್ಯಾರಂಟಿಗಳ್ನು ನೀಡಿದೆ. ಮಹಿಳೆಯರಿಗೆ ಬಸ್ ಫ್ರೀ, ಉಚಿತ ವಿದ್ಯುತ್, ತಿಂಗಳಿಗೆ 2 ಸಾವಿರ ರೂ. ಮಹಿಳೆಯರ ಖಾತೆಗೆ ಹಣ ವರ್ಗಾವಣೆ, ಅನ್ನಭಾಗ್ಯ, ಸ್ಕಾಲರ್ ಶಿಪ್ ಎಂದು ಗ್ಯಾರಂಟಿಗಳ ಮೇಲೆ ಗ್ಯಾರಂಟಿಗಳನ್ನು ನೀಡಿದೆ. ಈ ಹಣದುಬ್ಬರ ಸರಿದೂಗಿಸಲು ಬೆಲೆಗಳ ಏರಿಕೆ ಕೂಡ ಮಾಡಿದೆ. ಆದರೆ ಕೇಂದ್ರ ಸರ್ಕಾರ ಜಿಎಸ್​​ಟಿ ಯಾವಾಗ ಕಡಿತ ಮಾಡಿತೋ ಕೆಲ ರಾಜ್ಯದ ಸರ್ಕಾರಗಳು ಒದ್ದಾಡತೊಡಗಿವೆ. ಜಿಎಸ್​ಟಿ ಪರಿಷ್ಕರಣೆಯಿಂದ ಆಗಬಹುದಾದ ನಷ್ಟವನ್ನು ಸರಿದೂಗಿಸಲು ಸರ್ಕಾರ ಈಗ ಅಬಕಾರಿ ಇಲಾಖೆಗೆ ಸೂಚನೆ ಕೊಟ್ಟಿದ್ದು, ಇಲಾಖೆಯ ಸಿಬ್ಬಂದಿ ಬಾರ್ ಮಾಲೀಕರ ಪ್ರಾಣ ಹಿಂಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

WhatsApp Group Join Now
Telegram Group Join Now
Share This Article