ಧಾರವಾಡ ಐಐಟಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್

Ravi Talawar
ಧಾರವಾಡ ಐಐಟಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್
WhatsApp Group Join Now
Telegram Group Join Now
ಧಾರವಾಡ: ಧಾರವಾಡದ ಐಐಟಿ ಕೇಂದ್ರದಲ್ಲಿ ಸ್ಥಾಪಿತವಾದ ಧರ್ತಿ ಬಾಯೋನೆಟ್ಸ್ ಸೆಂಟರ್ ಉದ್ಘಾಟನೆಗೆಂದು ಬಂದಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಐಐಟಿಯ ಸುಮಾರು ಐದು‌ ವಿದ್ಯಾರ್ಥಿಗಳು ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ  ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸೀತಾರಾಮನ್ ಅವರು ತೀಕ್ಷ್ಣವಾಗಿಯೇ ಉತ್ತರಿಸಿದರು.
ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಕೆಲಸಕ್ಕೆ ತಯಾರಾಗಿರಬೇಕು. ವಿಶ್ವವಿದ್ಯಾಲಯಗಳು ಕೌಶಲ್ಯ ಕಲಿಸುವ ಕೆಲಸ ಮಾಡಬೇಕು. ಕೌಶಲ್ಯ ಅಷ್ಟೇ ಅಲ್ಲ ಇಲ್ಲಿ ಭಾಷೆ‌ ಕೂಡ ಅದರಲ್ಲಿ ಮುಖ್ಯ. ಭಾಷೆ ಕಲಿತರೆ ತಾವು ಯಾವುದೇ ಭಾಗದಲ್ಲಿ ಬದುಕಬಹುದು. ಭಾಷೆಯ ಜೊತೆ ತಂತ್ರಾಂಶ ಮುಖ್ಯ. ಹೆಚ್ಚುವರಿ ಸ್ಕಿಲ್ ತಮ್ಮಲ್ಲಿ ಇದ್ದರೆ ಹೆಚ್ಚು ಅವಕಾಶ ಸಿಗಲಿವೆ. ವಿಶ್ವವಿದ್ಯಾಲಯಗಳು‌ ಹೆಚ್ಚು ಕೋರ್ಸ್‌ಗಳನ್ನು ತರಬೇಕು ಎಂದು ಸೀತಾರಾಮನ್ ಹೇಳಿದರು.
ಯುಜಿ ಮತ್ತು ಪಿಜಿ ಮುಗಿಸಿದ ನಂತರ ಕೆಲಸಕ್ಕೆ ತಯಾರು ಮಾಡಿಕೊಂಡಿರಲೇಬೇಕು. ಸರ್ಕಾರ ಸಿಎಸ್‌ಆರ್ ಫಂಡ ಮುಖಾಂತರ ಹೆಚ್ಚು ಸಹಾಯಕ್ಕೆ ಈಗ ಮುಂದಾಗಿದೆ. ಆದರೆ, ಈಗ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಸ್ಪರ್ಧೆ ಎಂಬುದು ಬಹುಮುಖ್ಯ ಎಂದರು.
೫೯ ನಿಮಿಷಗಳಲ್ಲಿ ನಾವು ಒಂದು ಈಗ  ಲೋನ್ ಅಪ್ಲಿಕೇಷನ್ ಪಡೆಯುತ್ತಿದ್ದೇವೆ. ಡಿಜಿಟಲ್ ಮುಖಾಂತರ ನಾವು ಇದನ್ನು  ಮಾಡುತ್ತಿದ್ದೇವೆ. ಯಾವುದೇ ಸೆಕ್ಯುರಿಟಿ ಇಲ್ಲದೇ ಲೋನ್ ಕೊಡಲಾಗುತ್ತಿದೆ. ಸ್ಕಿಲ್ ಇದ್ದವರಿಗೆ ಸರ್ಕಾರ ತನ್ನ ಗ್ಯಾರಂಟಿ ಮೇಲೆ ಲೋನ್ ಕೊಡುತ್ತಿದೆ. ಯಾವುದೇ ಗ್ರಾಹಕ ಯಾವುದಾದರೂ ಬ್ಯಾಂಕನಲ್ಲಿ ಲೋನ್ ಪಡೆಯಬಹುದು. ಡಿಜಿಟಲ್ ಮುಖಾಂತರ ಇದನ್ನ ನಾವು ಸಾಧಿಸಿದ್ದೇವೆ. ಶೇ.೮೭ ರಷ್ಟು ಭಾರತ ದೇಶ ಡಿಜಿಟಲಿಕರಣ ಆಗಿದೆ. ಅದೇ ಬೇರೆ ದೇಶಕ್ಕೆ ಹೊಲಿಕೆ ಮಾಡಿದರೆ ಅವರು ಇನ್ನು ಇದರಲ್ಲಿ ಶೇ.೬೦ ರಷ್ಟೇ ಪ್ರಗತಿ ಸಾಧಿಸಿದ್ದಾರೆ. ಒಎನ್‌ಡಿಸಿ‌ ಮುಖಾಂತರ ಯಾವುದೇ ಭಾಗದಲ್ಲಿ ಕುಳಿತು ಡಿಜಿಟಲಿಕಣದಿಂದ ವ್ಯಾಪಾರ ವಹಿವಾಟು ಮಾಡಲು ಸಹಕಾರ ನೀಡುತ್ತಿದೆ. ಗ್ರಾಮೀಣ‌ ಮತ್ತು ಶಹರದಲ್ಲಿ ಎಲ್ಲ ಕಡೆ ಈಗ ಡಿಜಿಟಲಿಕರಣ ಕಾಣಲು ಸಿಗುತ್ತಿದೆ ಎಂದರು.
WhatsApp Group Join Now
Telegram Group Join Now
Share This Article