ಕಾರ್ಖಾನೆಯ ಎಲ್ಲ ವಿಭಾಗ ಪರಿಶೀಲಿಸಿ; ಕಾರ್ಮಿಕರ ಅಹವಾಲು ಆಲಿಸಿದ ಚನ್ನರಾಜ ಹಟ್ಟಿಹೊಳಿ

Ravi Talawar
ಕಾರ್ಖಾನೆಯ ಎಲ್ಲ ವಿಭಾಗ ಪರಿಶೀಲಿಸಿ; ಕಾರ್ಮಿಕರ ಅಹವಾಲು ಆಲಿಸಿದ ಚನ್ನರಾಜ ಹಟ್ಟಿಹೊಳಿ
WhatsApp Group Join Now
Telegram Group Join Now
ಎಂ.ಕೆ. ಹುಬ್ಬಳ್ಳಿ: ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ನೂತನ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ಕಾರ್ಖಾನೆಯ ಪ್ರತಿಯೊಂದು ವಿಭಾಗವನ್ನು ಪರಿಶೀಲಿಸಿ, ಕಾರ್ಯ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ನಂತರ ಕಾರ್ಖಾನೆಯ ಕಾರ್ಮಿಕರೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಕಾರ್ಖಾನೆಯ ಅಭಿವೃದ್ಧಿ, ಕಾರ್ಮಿಕರ ಕಲ್ಯಾಣ ಮತ್ತು ಬರುವ ಕಬ್ಬು ಹಂಗಾಮಿನ ನಿರ್ವಹಣೆಯ ಕುರಿತು ವಿಸ್ತೃತ ಚರ್ಚೆ ನಡೆಸಿ, ಎಲ್ಲ ವಿಭಾಗಗಳ ಸಮನ್ವಯದೊಂದಿಗೆ ಪೂರ್ವ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಮಿಕರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.ಈ ವೇಳೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article