ಏಕತೆಯೇ ನಮ್ಮ ರಾಷ್ಟ್ರದ ಅತಿ ದೊಡ್ಡ ಶಕ್ತಿ : ನರಸಿಂಹ ಕುಲಕರ್ಣಿ

Pratibha Boi
ಏಕತೆಯೇ ನಮ್ಮ ರಾಷ್ಟ್ರದ ಅತಿ ದೊಡ್ಡ ಶಕ್ತಿ : ನರಸಿಂಹ ಕುಲಕರ್ಣಿ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
WhatsApp Group Join Now
Telegram Group Join Now

ಯರಗಟ್ಟಿ: ಸಮೀಪದ ತಲ್ಲೂರ ಗ್ರಾಮ, ಪಟ್ಟಣ, ನಗರ ಸೇರಿದಂತೆ ದೇಶದ ಪ್ರತಿಯೊಬ್ಬ ಪ್ರಜೆಯೂ ನಿಸ್ವಾರ್ಥ ಮನೋಭಾವದಿಂದ ಸಂಘಟನಾತ್ಮಕವಾಗಿ ಸೇವೆ ಸಲ್ಲಿಸುವ ಜಗತ್ತಿನ ಏಕೈಕ ಸಂಘಟನೆ ಎಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಎಂದು ಮುಖ್ಯವಕ್ತಾರ ನರಸಿಂಹ ಕುಲಕರ್ಣಿ ಹೇಳಿದರು.
ಗ್ರಾಮದ ಶ್ರೀ ಹಾದಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಸೋಮವಾರ ಆರ್‌ಎಸ್‌ಎಸ್ ಸಂಘಟನೆಯ ನೂರು ವರ್ಷದ ಸಂಭ್ರಮಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ವಿಜಯ ದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ. ಡಾ.ಹೆಡಗೇವಾರ್ ಅವರು ೧೯೨೫ರಲ್ಲಿ ಹಿಂದುತ್ವ ರಕ್ಷಣೆ ಮತ್ತು ಸಮಾಜದ ಏಕತೆಯ ಮೂಲಕ ಭಾರತಕ್ಕೆ ಜಾಗತಿಕ ಸ್ಥಾನಮಾನ ತಂದುಕೊಡುವ ದೂರದೃಷ್ಟಿಯೊಂದಿಗೆ ಆರ್‌ಎಸ್‌ಎಸ್ ಅನ್ನು ಸ್ಥಾಪಿಸಿದರು ಎಂದರು.
ಮುಖಂಡ ವಿಕ್ರಮಕುಮಾರ ದೇಸಾಯಿ ಮಾತನಾಡಿ, ಜಾತಿ ಬೇಧ ಮರೆತು ನಾವೆಲ್ಲ ಒಂದು ಗೂಡಬೇಕು. ಈ ಐಕ್ಯತೆಯೇ ನಮ್ಮ ರಾಷ್ಟ್ರದ ಅತಿ ದೊಡ್ಡ ಶಕ್ತಿ ಎಂದರು.
ತೊರಗಲ್ಲಮಠದ ದೀಪಕ್‌ಸ್ವಾಮಿ ಸಾನಿಧ್ಯ ವಹಿಸಿದ್ದರು, ಪ್ರಸನ್ನ್ ಶಾಸ್ರ್ತಿ, ಶಂಕರಗೌಡ ಪಾಟೀಲ, ಬಿ.ಬಿ.ಅಣ್ಣಿಗೇರಿ, ಸಂತೋಶ ವಾಲಿ, ಗೋವಿಂದ ಪೂಜೇರ, ಪ್ರವೀಣ ಬೆಣ್ಣಿ, ಮನೋಜ ತುಪ್ಪದ, ಸಂಕೇತ ದೇಸಾಯಿ, ಬಸು ನಾಯ್ಕರ ಸೇರಿದಂತೆ ತಾಲೂಕಿನ ಗಣವೇಷಾದಾರಿಗಳು ಇದ್ದರು.

WhatsApp Group Join Now
Telegram Group Join Now
Share This Article