ವಿಜಯನಗರ(ಹೊಸಪೇಟೆ), : ಜಿಲ್ಲೆಯಲ್ಲಿ ಭüತ್ತದ ಕಟಾವು ಕಾರ್ಯ ಪ್ರಗತಿಯಲ್ಲಿದ್ದು, ಕೆಲವೆಡೆ ಅನಧಿಕೃತ ಖರೀದಿದಾರರು ರೈತರಿಂದ ಭüತ್ತ ಖರೀದಿಸಿ ಅಲ್ಪ ಮೊತ್ತ ಪಾವತಿಸಿ, ಉಳಿದ ಮೊತ್ತವನ್ನು ನಂತರ ಪಾವತಿಸುವುದಾಗಿ ತಿಳಿಸಿ ರೈತರ ಸಂಪರ್ಕಕ್ಕೆ ಸಿಗದೇ ರೈತರಿಗೆ ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವ ವಹಿಸುವಂತೆ ಕೃಷಿ ಜಂಟಿ ನಿರ್ದೇಶಕ ಡಿ.ಟಿ.ಮಂಜುನಾಥ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 12003 ಹೇಕ್ಟರ್, ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗಿದೆ. ಇದರಲ್ಲಿ ಕೂಡ್ಲಿಗಿ ತಾಲ್ಲೂಕುನಲ್ಲಿ 325 ಹೇಕ್ಟರ್, ಹೊಸಪೇಟೆ ತಾಲ್ಲೂಕಿನಲ್ಲಿ 2,521 ಹೇಕ್ಟರ್, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 1118 ಹೇಕ್ಟರ್, ಹರಪನಹಳ್ಳಿ ತಾಲ್ಲೂಕಿನಲ್ಲಿ 2205 ಹೇಕ್ಟರ್ ಹಾಗೂ ಹಡಗಲಿ ತಾಲ್ಲೂಕುನಲ್ಲಿ 5834 ಹೇಕ್ಟರ್, ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗಿರುತ್ತದೆ. ಆದ್ದರಿಂದ ರೈತರು ಅನಧಿಕೃತ ಖರೀದಿದಾರರಿಂದ ಎಚ್ಚರ ವಹಿಸಲು ಹಾಗೂ ಭತ್ತವನ್ನು ಅಧಿಕೃತ ಮಾರಾಟಗಾರರಿಗೆ ಮಾತ್ರ ಮಾರಾಟ ಮಾಡಲು ಮನವಿ ಮಾಡಲಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಕೋರಿದ್ದಾರೆ.