ಬರಗಾಲಕ್ಕೆ ತತ್ತರಿಸಿ ಗುಳೆ ಹೊರಟ ಗಡಿಭಾಗದ ಜನರು: ಜನಪ್ರತಿನಿಧಿಗಳ ಎಲೆಕ್ಷನ್ ಕ್ಯಾಂಪೇನ್ ಜೋರು!

Ravi Talawar
ಬರಗಾಲಕ್ಕೆ ತತ್ತರಿಸಿ ಗುಳೆ ಹೊರಟ ಗಡಿಭಾಗದ ಜನರು: ಜನಪ್ರತಿನಿಧಿಗಳ ಎಲೆಕ್ಷನ್ ಕ್ಯಾಂಪೇನ್ ಜೋರು!
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್05: ಮಳೆ ಇಲ್ಲದೆ ಬರಗಾಲ ಆವರಿಸಿದ್ದರಿಂದ ಕೃಷಿ ಚಟುವಟಿಕೆಗಳು ಮಂಕಾಗಿವೆ. ಹೀಗಾಗಿ ರೈತರು ನರೇಗಾ ಕೆಲಸಕ್ಕೆ ಹೋಗಬೇಕೆಂದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ಕಾಮಗಾರಿಗಳು ನಿಂತಿವೆ. ಇದರಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದ ರೈತರು ಏನು ಮಾಡಬೇಕೆಂದು ದಿಕ್ಕು ತೋಚದೆ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅನೇಕ ಗ್ರಾಮಗಳು ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿವೆ. ಮೀರಾಪುರಹಟ್ಟಿ ಖಾಲಿ ಖಾಲಿ. ಇದರಲ್ಲಿ ಚಿಕ್ಕೋಡಿ ತಾಲೂಕಿನ ಮೀರಾಪುರಹಟ್ಟಿ ಕೂಡ ಒಂದು. ಬರಗಾಲದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಈ ಗ್ರಾಮದ ಜನರು ಮಾರಿ ಕಣ್ಣು.. ಹೋರಿ ಕಣ್ಣು..ಯಾವ ಕೆಟ್ಟ ಕಣ್ಣು ಬಿತ್ತು ನಮ್ಮ ಊರ ಮ್ಯಾಗೆ ಎನ್ನುತ್ತ ವಿವಿಧ ಕೆಲಸಗಳನ್ನು ಅರಸಿ ಮಹಾರಾಷ್ಟ್ರದ ಮುಂಬೈ, ಪುಣೆ, ಸಾಂಗ್ಲಿ, ಮೀರಜ್​, ಕೊಲ್ಲಾಪುರ ಪಟ್ಟಣಗಳಿಗೆ ಗುಳೆ ಹೋಗಿದ್ದಾರೆ.

ಐದು ಸಾವಿರ ಜನ ಸಂಖ್ಯೆ ಇರುವ ಮೀರಾಪುರಹಟ್ಟಿ ಕೇವಲ 50-100 ಜನ ಇದ್ದಾರೆ. ಯುಗಾದಿ ಹಬ್ಬ, ಜಾತ್ರೆ ಮತ್ತು ಸಮಾರಂಭ ಅಂತ ಖುಷಿ ಖುಷಿಯಾಗಿ ಇರಬೇಕಾದ ಜನರು ಹೊಟ್ಟೆ ಪಾಡಿಗಾಗಿ ಊರು ಊರು ತಿರುಗುತ್ತಿದ್ದಾರೆ. ಜನರ ಪರಿಸ್ಥಿತಿ ಈ ರೀತಿಯಾಗಿದ್ದರೆ, ಚುನಾವಣೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.

 

 

WhatsApp Group Join Now
Telegram Group Join Now
Share This Article