ಧಾರವಾಡ: ನಟ, ರಂಗ ಕಲಾವಿದ, ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ನಿಧನ ಕೇವಲ ಉತ್ತರ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕಾದ ನಷ್ಟ ಎಂದು ರಂಗಕರ್ಮಿ ಹಾಗೂ ರಾಜು ತಾಳಿಕೋಟೆ ಅವರ ಆಪ್ತ ಪ್ರಭು ಹಂಚಿನಾಳ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉಡುಪಿಯ ಹೆಬ್ರಿಯಲ್ಲಿ ಶಂಕರಾಭರಣ ಎನ್ನುವ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಿನ್ನೆ ಅವರಿಗೆ ಎದೆ ನೋವು ಶುರುವಾಗಿತ್ತು. ಭಾನುವಾರವಷ್ಟೇ ಅವರಿಗೆ ಎದೆ ನೋವಾಗಿದ್ದರ ಬಗ್ಗೆ ನನ್ನೊಡನೆ ಮಾತನಾಡಿದ್ದರು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವಿವರಿಸಿದರು. ಧಾರವಾಡದ ರಂಗಾಯಣ ಆವರಣದಲ್ಲಿ ಅಂತಿಮ ನಮನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ತಾಳಿಕೋಟೆ ಅವರ ಪಾರ್ಥಿವ ಶರೀರ ಆಗಮಿಸಲಿದೆ.