ನವದೆಹಲಿ, ಅಕ್ಟೋಬರ್ 14: ಗಾಜಾ ಕದನ ವಿರಾಮ ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಮಾಡಿಕೊಂಡ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಅದರ ಬೆನ್ನಲ್ಲೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿಯನ್ನು ಹೊಗಳಿದ್ದಾರೆ. ಭಾರತ ಅತ್ಯುತ್ತಮ ದೇಶ. ಅದನ್ನು ಮುನ್ನಡೆಸುತ್ತಿರುವವರು ನನ್ನ ಉತ್ತಮ ಸ್ನೇಹಿತ ಎಂದು ಟ್ರಂಪ್ ಹೇಳಿದ್ದಾರೆ. ವಿಶೇಷವೆಂದರೆ, ಟ್ರಂಪ್ ಈ ಹೇಳಿಕೆ ನೀಡುವಾಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಟ್ರಂಪ್ ಹಿಂದೆಯೇ ನಿಂತುಕೊಂಡಿದ್ದರು.
ನನ್ನ ಉತ್ತಮ ಸ್ನೇಹಿತ ಮೋದಿ ನೇತೃತ್ವದಲ್ಲಿ ಅತ್ಯುತ್ತಮ ಭಾರತದ ಆಡಳಿತ: ಟ್ರಂಪ್
