ಕಾಂಗ್ರೆಸ್ ಸರ್ಕಾರದ ವಿರುದ್ಧ ‘I LOVE RSS’ ಪೋಸ್ಟರ್ ಅಭಿಯಾನ

Ravi Talawar
ಕಾಂಗ್ರೆಸ್ ಸರ್ಕಾರದ ವಿರುದ್ಧ ‘I LOVE RSS’ ಪೋಸ್ಟರ್ ಅಭಿಯಾನ
WhatsApp Group Join Now
Telegram Group Join Now

ಮಂಡ್ಯ, ಅಕ್ಟೋಬರ್ 14: ಆರ್​ಎಸ್​ಎಸ್ ಚಟುವಟಿಕೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ಹೊತ್ತಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ‘I LOVE RSS’ ಪೋಸ್ಟರ್ ಅಭಿಯಾನ ಶುರುಮಾಡಲಾಗಿದೆ. ‘I LOVE RSS’ ಎಂಬ ಪೋಸ್ಟರ್ ಹಿಡಿದು ಘೋಷಣೆ ಕೂಗಿದ ಆರ್​ಎಸ್​ಎಸ್ ಸ್ವಯಂ ಸೇವಕರು, ವಾಹನಗಳು, ಅಂಗಡಿಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು. ದೇಶ ವಿರೋಧಿ ಸಂಘಗಳನ್ನು ನಿಷೇಧಿಸಿ, ಆದರೆ ದೇಶ ಭಕ್ತ ಸಂಘಟನೆಗಳನ್ನಲ್ಲ ಎಂದು ಘೋಷಣೆ ಕೂಗಿದರು.

WhatsApp Group Join Now
Telegram Group Join Now
Share This Article