ಸಂಕೇಶ್ವರ: ಮಹಾರಾಷ್ಟ್ರದಲ್ಲಿನ ಗಡಹಿಂಗ್ಲಜ ತಾಲೂಕಿನ ಸಂತ ಗಜಾನನ ಮಹಾರಾಜ್ ರೂರಲ್ ಪಾಲಿಟೆಕ್ನಿಕ್ ಮಹಾಗಾಂವ, ಕಾಲೇಜಿನಲ್ಲಿ ಇತ್ತೀಚೆಗೆ ನಡೆದ “ಅನ್ನುತ್ತಾರ- 2025 ” ರ ಕ್ವಿಜ್ ಸ್ಪರ್ಧೆಯಲ್ಲಿ ನಿಡಸೋಶಿಯ ಎಸ್. ಜೆ. ಪಿ. ಎನ್. ಟ್ರಸ್ಟ್ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು.
ಪಾಲಿಟೆಕ್ನಿಕ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಸಾಗರ ಹುಣಚಾಳೆ ಮತ್ತು ಆಶ್ರಫ್ ಮುಲ್ಲಾ ಮೂರನೇ ಬಹುಮಾನ ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳನ್ನು ನಿಡಸೋಶಿಯ ಎಸ್. ಜೆ. ಪಿ. ಎನ್. ಟ್ರಸ್ಟ್ ನ ಅಧ್ಯಕ್ಷರಾದ ಡಾ. ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮಿಜೀಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಪ್ರೊ .ಬಿ.ಆರ್. ಉಮರಾಣೆ ಹಾಗೂ ಸಿಬ್ಬಂಧಿ ವರ್ಗದವರು ಅಭಿನಂದಿಸಿದ್ದಾರೆ.