ಘಟಪ್ರಭಾ. ಮಲ್ಲಾಪುರ ಪಿಜಿ ಪಟ್ಟಣಕ್ಕೆ ಕರ್ನಾಟಕ ಘನ ಸರ್ಕಾರದ ನೂತನ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಬರಮಣ್ಣ ಉಪ್ಪಾರ ಇವರನ್ನು ಮಲ್ಲಾಪೂರ, ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಉಪ್ಪಾರ ಸಮಾಜದ ಬಾಂಧವರಿಂದ ಅವರಿಗೆ ಅದ್ದೂರಿಯಾಗಿ ಬರಮಾಡಿಕೊಂಡು ಸಮಾಜದ ವಿವಿಧ ಮುಖಂಡರುಗಳು ಹಾಗೂ ಸಂಘ ಸಂಸ್ಥೆಗಳಿಂದ ಸತ್ಕರಿಸಲಾಯಿತು .ಇದೇ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಅವರನ್ನು ಸತ್ಕರಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಮಾರುತಿ ಚೌಕಸಿ, ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ,ಯಲ್ಲಪ್ಪ ಅಟ್ಟಿಮಿಟ್ಟಿ, ಮಂಜುನಾಥ ಪಾಟೀಲ, ಶಿವರಾಜ ಚಿಗಡೊಳ್ಳಿ, ಶಶಿಧರ ಚೌಕಶಿ,ಕಲ್ಲಪ್ಪ ನಾಯಕ, ಶಿದ್ರಾಮ ಚೌಕಶಿ, ಹಾಗೂ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು, ಹಿರಿಯರಾದ ಉಮೇಶ ನಾಯಿಕ, ನಾಗರಾಜ ನಾಯಿಕ, ರವೀಂದ್ರ ಉಪ್ಪಾರ್ ,ಕಾಡಪ್ಪ ನಾಯಿಕ, ಯಲ್ಲಪ್ಪ ಚಿಪ್ಪಲಕಟ್ಟಿ, ಸಂಜು ನಾಯಕ, ಮಡ್ಯಪ್ಪ ರಾಜಾಪುರೆ, ಮುತ್ತು ನಾಯಿಕ, ಪುಟ್ಟು ಖಾನಾಪುರೆ, ಆನಂದ ಬನ್ನನವರ, ಅಡವೆಪ್ಪ ಮಣ್ಣಿಕೇರಿ, ಹಾಗೂ ಸಮಾಜದ ಮುಖಂಡರುಗಳು ಯುವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.