ಮಹಾಲಿಂಗಪುರ : ಗ್ರಾಮ.ಪಟ್ಟಣದಲ್ಲಿರುವ ಪ್ರತಿಯೊಬ್ಬ ಮಹಿಳೆಯರು ತಮ್ಮ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು, ಒಂದು ಮಹಿಳೆ ಆರೋಗ್ಯವಾಗಿದ್ದರೆ ಆ ಕುಟುಂಬವೆ ಆರೋಗ್ಯವಾಗಿರಲು ಸಾಧ್ಯ ಎಂದು ಖ್ಯಾತ ವ್ಯೆದ್ಯರಾದ ಡಾ ಶರ್ವಾಣಿ ಕನಕರಡ್ಡಿ ಹೇಳಿದರು.
ಸೋಮವಾರ ಮುಂಜಾನೆ ಸ್ಥಳೀಯ ಸಮೂದಾಯ ಆರೋಗ್ಯ ಕೇಂದ್ರ ಮತ್ತು ಓಂ ಸಾಯಿ ಎಜುಕೇಶನ ಸೋಸಾಯಿಟಿ, ಡಾ. ವ್ಹಿ.ಪಿ ಕನಕರಡ್ಡಿ ಮೇಮೋರಿಯಲ್ ಕಾಲೇಜ ಆಪ್ ನರ್ಸಿಂಗ ಆಶ್ರಯದಲ್ಲಿ ನಡೆದ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನದಲ್ಲಿ ಮಾತನಾಡಿದ ಅವರು ಮಹಿಳೆಯರು ದಿನಂಪ್ರತಿ ಮತ್ತು ಗರ್ಭವತಿಯಾದಾಗ ಯಾವ ರೀತಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು, ಯಾವ ಯಾವ ಆಹಾರ ತಿನ್ನಬೇಕು, ಹುಟ್ಟಿದ ಮಗುವನ್ನು ಯಾವ ರೀತಿಯಲ್ಲಿ ಯೋಡಿಕೊಳ್ಳಬೇಕು ಎನ್ನುವುದರ ಬಗ್ಗೆ ಆಸ್ಪತ್ರೆಯಲ್ಲಿ ನೆರೆದಿರುವ ಮಹಿಳೆಯರಿಗೆ ಮನದಟ್ಟುವ ಹಾಗೆ ತಿಳಿಹೇಳಿದರು.
ನಂತರ ಮಾತನಾಡಿದ ಸಮೂದಾಯ ಆರೋಗ್ಯ ಕೇಂದ್ರದ ಮುಖ್ಯವ್ಯೆದ್ಯಾಧಿಕಾರಿ ಡಾ. ಎಸ್.ಎಸ್ ಮೋಸಿನ ಒಂದು ಮನೆ ಅಥವಾ ಒಂದು ಕುಟುಂಬ ಚನ್ನಾಗಿ ಇರಬೇಕಾದರೆ ಆ ಕುಟುಂಬದ ಒಡತಿ ಮೊದಲು ಆರೋಗ್ಯವಂತರಾಗಿರಬೇಕು, ಅಂದಾಗ ಮಾತ್ರ ಇಡಿ ಆ ಕುಟುಂಬವೇ ಆರೋಗ್ಯವಾಗಿರಲು ಸಾಧ್ಯ. ಮಕ್ಕಳಗೆ ಚಿಕ್ಕದಿನಿಂದಲೆ ಸರಿಯಾದ ಮಾರ್ಗ ತೋರಿಸುವಳು ತಾಯಿ, ಆ ತಾಯಿಗೆ ಮೊದಲು ಆರೋಗ್ಯದ ಬಗ್ಗೆ ಎಲ್ಲ ತರಹದ ಮಾಹಿತಿ ಇರಬೇಕು, ಮಕ್ಕಳ ಆಹಾರ ಪದ್ದತಿ, ಅವರ ಬೆಳವಣಿಗೆ ಬೇಕಾಗುವ ಅವಶ್ಯಕ ಆಹಾರವನ್ನು ತಿನ್ನಿಸುತ್ತ ಬಂದಾಗ ಮಾತ್ರ ಅವರ ಬೆಳವಣಿಗೆ ಚನ್ನಾಗಿ ಆಗಲು ಸಾಧ್ಯ ಆದ್ದರಿಂದ ಮೊದಲು ಮಹಿಳೆಯರು ತಮ್ಮ ಹೆಂತಾ ಪರಿಸ್ಥೀತಿಯಲ್ಲಿಯೂ ಕೂಡಾ ಎದೆ ಗುಂದದೆ ಮೊದಲು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡಾಗ ಮಾತ್ರ ಇಡಿ ಕುಟುಂಬ ಆರೋಗ್ಯವಾಗಿರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಡಾ. ವ್ಹಿ.ಪಿ ಕನಕರಡ್ಡಿ ಮೇಮೋರಿಯಲ್ ಕಾಲೇಜ ಆಪ್ ನರ್ಸಿಂಗನ ವಿದ್ಯಾರ್ಥಿಗಳು ತಾಯಿ ಮತ್ತು ಮಗುವಿನ ಉತ್ತಮ ಬೆಳವಣಿಗೆಗೆ ಕಾರಣ, ಮತ್ತು ಮನೆಯಲ್ಲಿನ ಆಹಾರದ ಬಳಕೆ, ತಾಯಿ ಹಾಲು ಮಕ್ಕಳಿಗೆ ಎಷ್ಟು ಶ್ರೇಷ್ಠ ಹೀಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಹಿಳೆಯರಿಗೆ ಮನದಟ್ಟಾಗುವ ಹಾಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯೆದ್ಯರಾದ ಡಾ.ಸಿ.ಎಂ ವಜ್ಜರಮಟ್ಟಿ, ಡಾ.ಎಸ್.ಹೆಚ್, ತೇಲಿ, ಪ್ರೋ. ಅನೀಲ್ ಪತ್ರಿಮಠ, ಶಿಕ್ಷಕಿಯರಾದ ದೀಕ್ಷಾ, ಲಕ್ಷ್ಮೀ, ಶಿವಲಿಂಗ ಶಿರಗುಪ್ಪಿ, ಆನಂದ ಗೌಡರ, ಸಂಗೀತಾ ಹತ್ರೋಟೆ, ವಾಣಿ ಉಪ್ಪಾರ, ಕವಿತಾ ಗುಡದನ್ನವರ, ಪರಮಾನಂದ ತಳಗೇರಿ, ಪ್ರಜ್ವಲ್ ತೋಟಗಿ, ಎಶೋದಾ, ವೈಷ್ಣವಿ ಒಂಟಮೂರಿ ಹಾಗೂ ಕನಕರಡ್ಡಿ ಸರ್ಸಿಂಗ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥೀತರಿದ್ದರು. ವಿನಯಕುಮಾರ ಮೋಡ್ಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು-ಡಾ ಶರ್ವಾಣಿ
