ಬಳ್ಳಾರಿ: ಕರ್ನಾಟಕ ಸರ್ಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿ. ಕನ್ನಡ ಭವನ ಎರಡನೇ ಮಹಡಿ ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾನ್ಯ ಅಧ್ಯಕ್ಷರಾದ ಎಲ್ ಎನ್ ಮುಕುಂದ ರಾಜ್ ರವರು ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಜಯನಗರ ಜಿಲ್ಲಾ ಚಕೋರ ವೇದಿಕೆಯ ಶ್ರೀ ವೆಂಕಟೇಶ್ ಬಡಿಗೇರ್ ಕಮಲಾಪುರ ರವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಚಕೋರ ವೇದಿಕೆ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚಕೋರ ವೇದಿಕೆಯ ಮೂಲಕ ಸಾಹಿತ್ಯ ಕಾರ್ಯಕ್ರಮಗಳನ್ನ ರೂಪಿಸುವ ಮಹತ್ವ ಯೋಜನೆ ರೂಪಿಸಿದೆ. ಈ ವೇದಿಕೆ ಆಯಾ ಜಿಲ್ಲೆಯಲ್ಲಿರುವ ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ ಉಪನ್ಯಾಸ ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಮಾನ್ಯ ಸದಸ್ಯ ಸಂಚಾಲಕರಾದ ಡಾ. ಮಲ್ಲಿಕಾರ್ಜುನ ಬಿ.ಮಾನ್ಪಾಡಿ ಮಾರ್ಗದರ್ಶನದೊಂದಿಗೆ ಅಕಾಡೆಮಿ ಘನತೆ ಗೌರವ ತಕ್ಕಂತೆ ಸಾಹಿತ್ಯ ಚಕೋರ ವಿಚಾರ ವೇದಿಕೆ ನಿರ್ವಹಿಸಿಕೊಂಡು ಹೋಗಲು ತಿಳಿಸಲಾಗಿದೆ. ಚಕೋರ ವಿಚಾರ ಸಾಹಿತ್ಯ ವಾಟ್ಸಾಪ್ ಗ್ರೂಪ್ ರಚಿಸುವುದರ ಮೂಲಕ ಚಕೋರ ವೇದಿಕೆ ಪ್ರಾರಂಭಿಸಬಹುದು ಎಂದು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಡಾ.. ವೀರೇಶ್ ಬಡಿಗೇರ್ ಕನ್ನಡ ಪ್ರಾಧ್ಯಾಪಕರು.ಕ.ವಿ.ವಿ. ಹಂಪಿ. ಡಾ.ಬಿ.ಜಿ ಕನಕೇಶ್ ಮೂರ್ತಿ.ಡಾ. ದಯಾನಂದ ಕಿನ್ನಾಳ. ಮೌನೇಶ್ ಬಡಿಗೇರ್ ಕನ್ನಡ ಸಹಾಯಕ ಪ್ರಾಧ್ಯಾಪಕರು. ನಾಗರಾಜ್ ಪತ್ತಾರ್. ಇತಿಹಾಸ ಉಪನ್ಯಾಸಕರು ಹೊಸಪೇಟೆ. ಶ್ರೀಮತಿ ಶೋಭಾ ಶಂಕರಾನಂದ . ಶ್ರೀಮತಿ ರೇಖಾ ಕನ್ನಡತಿ ಡಾ. ಸುಲೋಚನ. ಎರಿಸ್ವಾಮಿ ಸಾಲುಮರದ ಸಿ.ಎನ.ಅಶೋಕ.ಡಾ. ಶಿವರಾಜ ಗೌಡ್ರ. ಹುಲಿಯೂರುದುರ್ಗ ಲಕ್ಷ್ಮೀನಾರಾಯಣ.ಡಾ. ಎಂ ಧರ್ಮದ ಗೌಡ. ಎಂ ವಿರುಪಾಕ್ಷಯ್ಯ ಸ್ವಾಮಿ. ಸಿದ್ದಲಿಂಗೇಶ ಅಂಕಲಕೋಟಿ. ಅರುಣ್ ಕುಮಾರ್ ಕಲ್ಕಂಬ. ಮನ್ಸೂರ್ ಭಾಷಾ ಶುಭ ಹಾರೈಸಿದ್ದಾರೆ.