ಮಲಪ್ರಭಾ- ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮ (ಕಾಡಾ) ದ ಅಧ್ಯಕ್ಷರಾಗಿ ಯುವರಾಜ ಕದಂ ಸೋಮವಾರ ಅಧಿಕಾರ ಸ್ವೀಕರಿಸಿದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್ ಸೇಠ್, ರಾಜು ಕಾಗೆ, ಮಾಜಿ ಶಾಸಕ ಶಾಮ್ ಘಾಟಗೆ, ಕೆಡಿಪಿ ಸದಸ್ಯ ಬಸವರಾಜ ಮ್ಯಾಗೋಟಿ ಮೊದಲಾದವರಿದ್ದರು.