ನೇಸರಗಿ. ಬರುವ ನವೆಂಬರ 1 ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವವನ್ನು ನೇಸರಗಿ ಗ್ರಾಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಯೋಗದಲ್ಲಿ ಅದ್ದೂರಿಯಾಗಿ ಆಚರಿಸಲಾಗುವದೆಂದು ಗ್ರಾಮ ಪಂಚಾಯತ ಅಧ್ಯಕ್ಷ ವೀರಭದ್ರ ಚೋಭಾರಿ ಹೇಳಿದರು.
ಅವರು ಇಲ್ಲಿನ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ಆಚರಣೆ ಕಮಿಟಿ ಅಧ್ಯಕ್ಷ ಗುರುರಾಜ ತುಬಚಿ ಮಾತನಾಡಿ ನವೆಂಬರ 01 ರಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಕನ್ನಡಾಂಬೆ ಭುವನೇಶ್ವರಿ ಪೂಜೆ, ವಾದ್ಯ ಮೇಳಗಳೊಂದಿಗೆ ಪ್ರಾರಂಭವಾಗುವ ಮೆರವಣಿಗೆ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿ ಶಾಸಕರ ಒಪ್ಪಿಗೆ ಮೂಲಕ ಅವರ ಉಪಸ್ಥಿತಿಯಲ್ಲಿ ನೇಸರಗಿ ಬಸ್ ನಿಲ್ದಾಣಕ್ಕೆ ಶ್ರೀ ಚನ್ನವೃಷಬೇಂದ್ರ ಹೆಸರು ನಾಮಕರಣ ಮಾಡಲು ಚರ್ಚಿಸಲಾಯಿತು.
ಬಸ್ ನಿಲ್ದಾಣಕ್ಕೆ ಹೋಗುವ ದ್ವಾರಗಳಲ್ಲಿ ಒಂದು ಕಡೆ ಶ್ರೀ ವೀರಭದ್ರೇಶ್ವರ ಫೋಟೋ ಇನ್ನೊಂದು ಕಡೆ ಶ್ರೀ ಜೋಡಗುಡಿ ದೇವಸ್ಥಾನದ ಚಿತ್ರಗಳನ್ನು ಲಗತ್ತಿಸಲು ಚರ್ಚಿಸಲಾಯಿತು. ಬಸ ನಿಲ್ದಾಣದ ಗೋಡೆಯ ಮೇಲೆ ಜ್ಞಾನಫೀಠ ಪ್ರಶಸ್ತಿ ಪಡೆದ ನಾಡಿನ ಗಣ್ಯರ ಭಾವಚಿತ್ರ ಅನಾವರಣ ಮಾಡುವದು. ಅದಾದ ಬಳಿಕ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ನೇತೃತ್ವದಲ್ಲಿ ಬಹಿರಂಗ ಸಭೆ ಅಲ್ಲಿಯೇ ಸಮಾರೋಪ ನಡೆಸಲು ಚರ್ಚಿಸಲಾಯಿತು.
ಈ ಪೂರ್ವಭಾವಿ ಸಭೆಯಲ್ಲಿ ಹಿರಿಯರಾದ ಬಾಳಪ್ಪ ಮಾಳಗಿ,ಶ್ರೀ ವೀರಭದ್ರೇಶ್ವರ ಪಿಕೆಪಿಎಸ್ ಅಧ್ಯಕ್ಷ ಸೋಮನಗೌಡ ಪಾಟೀಲ,ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ,ಎ ಎಸ್ ಐ ಇಮಾಮ ಫಕಾಲಿ, ಅರಣ್ಯ ಇಲಾಖೆಯ ಅಶೋಕ ಬಿಚ್ಚಗತ್ತಿ,ಸಂತೋಷ ಪಾಟೀಲ, ಗ್ರಾ ಪಂ ಸದಸ್ಯ ಯಮನಪ್ಪ ಪೂಜೇರಿ, ಕಾರ್ಯದರ್ಶಿ ಭೀಮಸಿ ಮಾಳಗಿ, ಸುಜಾತ ತುಬಾಕಿ, ಶಿವು ಮಾಳಗಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ, ಎಲ್ಲ ಸಮಾಜದ ಹಿರಿಯರು, ಮಾಜಿ ಸೈನಿಕರ ಸಂಘದ ಸದಸ್ಯರು ಭಾಗವಹಿಸಿದ್ದರು.


