ಯರಗಟ್ಟಿ: ಸಮಗ್ರ ಅಭಿವೃದ್ಧಿಯೋಂದಿಗೆ ಕ್ಷೇತ್ರದ ಯರಗಟ್ಟಿ ಮತ್ತು ಸವದತ್ತಿ ಅವಳಿ ತಾಲೂಕಿನ ಮತದಾರರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಯರಝರ್ವಿ ಗ್ರಾಮದಲ್ಲಿ ಶನಿವಾರ ವಿಶ್ವಾಸ ವೈದ್ಯ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ವಿಶ್ವಾಸ ವೈದ್ಯ ಅವರ ೪೪ನೇ ವರ್ಷದ ಜನ್ಮದಿನಾಚರಣೆ ಹಾಗೂ ಸಂಗೀತ ಸಂಜೆ, ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯರಗಟ್ಟಿ ತಾಲೂಕಿನ ಸಮಸ್ತ ಜನತೆ ಬೆಳಗಾವಿ ಬಿಡಿಸಿಸಿ ಬ್ಯಾಂಕ ನಿರ್ದೆಶಕನಾಗಿ ಅವಿರೋಧವಾಗಿ ಆಯ್ಕೆಮಾಡಿ ನನ್ನ ಹುಟ್ಟು ಹಬ್ಬಕ್ಕೆ ವಿಶೇ?ವಾದ ಉಡುಗೊರೆ ನೀಡಿದ್ದೀರಿ ತಾಲೂಕಿನ ಸಮಸ್ತ ಜನತೆಗೆ ಅಭಿನಂದನೆ ಸಲ್ಲಿಸಿದ್ದರು.
ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿಗಳ ಅನಕೂಲಕ್ಕೆ ಪಿಯುಸಿ ಕಾಲೇಜು ಪ್ರಾರಂಭಿಸಲು ಮಂಜುರಾತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಿ ಮಾತನಾಡಿ, ಮಠ ಮಾನ್ಯ ಉಳುವಿಗೆ ಇಂದಿನ ಯುವಕರು ಮುಂದಾಗಬೆಕು. ಜನಪದ ಸಾಹಿತ್ಯ ಗ್ರಾಮೀಣ ಭಾಗದ ಕಲೆ ಆಗಿದ್ದು ಕಲೆ ಮೂಲಕ ಜನ್ಮ ದಿನಾಚರಣೆ ಮಾಡುವ ಮೂಲಕ ಮಾದರಿಯಾಗಿದ್ದಿರಿ ಎಂದರು. ವಿಶ್ವಾಸ ವೈದ್ಯ ಅವರನ್ನು ಗ್ರಾಮಸ್ಥರು, ಅಭಿಮಾನಿಗಳು ಬೃಹತ್ತಾಕಾರದ ಸೇಬು ಹಣ್ಣಿನ ಹೂಮಾಲೆ ಇಂದ ಸನ್ಮಾನಿಸಿದರು.
ಇದಕ್ಕೂ ಮುಂಚೆ ಶಾಸಕ ವಿಶ್ವಾಸ ವೈದ್ಯ ಅವರನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಪುಷ್ಪಾರ್ಚನೆ ಮೂಲಕ ಬರಮಾಡಿಕೊಂಡರು.ಗ್ರಾಮ ದೇವತೆ ಆಶೀರ್ವಾದ ಪಡೆದರು.
ಸ್ಥಳೀಯ ಯಲ್ಲಾಲಿಂಗ ಮಠದ ಚಿದಾನಂದ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು, ಗ್ರಾ.ಪಂ.ಅಧ್ಯಕ್ಷ ಬಸವ್ವ ನಂದಿ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಕಾಂಗ್ರೆಸ್ ಮುಖಂಡ ಪ್ರಕಾಶ ವಾಲಿ, ಬೆಮುಲ ನಿರ್ದೇಶಕ ಶಂಕರ ಇಟ್ನಾಳ, ಪ್ರಥಮ ದರ್ಜೆ ಗುತ್ತಿಗೆದಾರ ಮಹಾಂತೇಶ ಉರಬ್ಬಿನ್ನವರ, ಬಂಗಾರೆಪ್ಪ ಹರಳಿ, ಅಶ್ವಥ ವೈದ್ಯ, ಜಿ.ಪಂ. ಮಾಜಿ ಸದಸ್ಯ ಫಕ್ಕೀರಪ್ಪ ಹದ್ದನ್ನವರ, ಚಾಯಪ್ಪ ಹುಂಡೇಕಾರ, ಮಲಿಕಸಾಬ ಬಾಗವಾನ, ಆರ್.ಕೆ.ಪಟಾತ, ಲಕ್ಷ್ಮಣ ಕುಂಟಿರಪ್ಪಗೋಳ, ವಿಠ್ಠಲ ಬಂಟನೂರ, ಸಂತೋ? ಹಾದಿಮನಿ, ಮುನವಳ್ಳಿ ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಖ್ಯಾತ ಜಾನಪದ ಕಲಾವಿದ ಬಾಳು ಬೆಳಗುಂದಿ, ಪ್ರಕಾಶ ಸೂಣಧೋಳಿ, ಯಂಕಣ್ಣಾ ಕಳ್ಳಿಗುದ್ದಿ, ತವನಪ್ಪ ಟೋಪ್ಪಣ್ಣವರ, ಮಂಜು ಪಾಂಚಗಿ, ವೀರೇಶ ಬ್ಯಾಹಟ್ಟಿ, ಅಶೋಕ ಕುಡಚಿ, ನಿಖಿಲ ಪಾಟೀಲ, ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ, ಅಶೋಕ ಗಡಮ್ಮನ್ನವರ, ಸತ್ಯಪ್ಪ ತಲ್ಲೂರ, ಎಂ.ಎಂ.ಶಂಕಲಿಂಗಪ್ಪ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಇದ್ದರು.