ಬಳ್ಳಾರಿ,ಅ.13: ತುಂಗಭದ್ರ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡಬೇಕೆಂದು ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಅವರಿಗೆ ಶನಿವಾರದಂದು ಮನವಿ ಪತ್ರ ಸಲ್ಲಿಸಿ ತುಂಗಭದ್ರ ರೈತ ಸಂಘವು ಒತ್ತಾಯಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ.ದರೂರು ಪುರುಷೋತ್ತಮಗೌಡ ಮಾತನಾಡಿ, ೨೦೨೫ರ ಜೂನ್ ೨೭ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ, ಮುಂಗಾರು ಬೆಳೆಗೆ ನೀರು ಕೊಡುವ ಕುರಿತು ತೀರ್ಮಾನಿಸಲಾಯಿತು. ಹಿಂಗಾರು ಬೇಸಿಗೆ ಬೆಳೆಯ ಕುರಿತು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನೀರಾವರಿ ತಜ್ಞರನ್ನು ಒಳಗೊಂಡAತೆ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ಗೇಟುಗಳ ಆಳವಡಿಕೆ ಹಾಗೂ ಬೇಸಿಗೆ ಬೆಳೆಗೆ ನೀರು ಕೊಡುವ ಕುರಿತು ತೀರ್ಮಾನಿಸೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ.
ಜಲಾಶಯದ ಎಡದಂಡೆ ಮತ್ತು ಬಲದಂಡೆಯ ಎಲ್ಲಾ ಕಾಲುವೆಗಳಿಗೂ ಜನವರಿ ಕೊನೆವರೆಗೂ ನೀರು ಕೊಟ್ಟರೂ, ಇನ್ನು ಜಲಾಶಯದಲ್ಲಿ ೪೦ ಟಿಎಂಸಿ ನೀರು ಉಳಿಸಿಕೊಂಡರೆ, ಗೇಟುಗಳ ಅಳವಡಿಕೆಗೆ ೪೦ ಟಿಎಂಸಿ ನೀರು ಅಡ್ಡಿಯಾಗುವುದಿಲ್ಲ ಹಾಗೂ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ, ಜೂನ್, ಜುಲೈ, ಈ ಆರು ತಿಂಗಳು ೧೮೦ ದಿನಗಳು ೩೩ ನೂತನ ಗೇಟುಗಳನ್ನು ಅಳವಡಿಕೆಗೆ ಸಮಯ ಸಿಗಲಿದೆ ಹಾಗೂ ಬೇಸಿಗೆ ಬೆಳೆಗೆ ನೀರಿನ ಲಭ್ಯತೆಯಾಗಲಿದೆ ಮತ್ತು ಬಲದಂಡೆಯ ಹಾಗೂ ಎಡದಂಡೆಯ ಕಾಲುವೆಗಳ ಮುಖಾಂತರವೇ ನಾಲ್ಕು ಜಿಲ್ಲೆಗಳ ರೈತರಿಗೆ ಕುಡಿಯುವ ನೀರು ಕೊಡಬೇಕಾಗಿದೆ.
ಕಾರಣ ತಾವು ದಯವಿಟ್ಟು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೊAದಿಗೆ ಮಾತನಾಡಿ, ಬೇಗನೆ ತುಂಗಭದ್ರಾ ಜಲಾಶಯದ ನೀರಾವರಿ ಸಲಹ ಸಮಿತಿ ಸಭೆಯನ್ನು ಕರೆದು ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಿಗೆ ಬೇಸಿಗೆ ಬೆಳೆಗೆ ನೀರಿನ ಅನುಕೂಲತೆ ಮಾಡಿಕೊಡಬೇಕೆಂದು ಪುರುಷೋತ್ತಮಗೌಡ ಮತ್ತಿತರರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರುಗಳಾದ ಎಂ.ವೀರಭದ್ರನಾಯಕ, ಕುಡಿತಿನಿ ಎ.ಪಂಪಾಪತಿ, ಕೊಂಚಿಗೇರಿ ಮಲ್ಲಪ್ಪ, ಕುರುಬರ ಗಾದಿಲಿಂಗನ ಮೂರ್ತಿ, ಶ್ರೀಧರಗಡ್ಡೆ ಮಲ್ಲಿಕಾರ್ಜುನ, ಮುಷ್ಟಗಟ್ಟ ಭೀಮನಗೌಡ, ಮೋಕಾ ಭೀಮಪ್ಪನಾಯಕ, ಕಂಪ್ಲಿ ಸತ್ಯನಾರಾಯಣ, ಸಂಗನಕಲ್ಲು ದೊಡ್ಡದಾಸಪ್ಪ, ದೇವಸಮುದ್ರ ಹಳ್ಳಳ್ಳಿ ವೀರೇಶ, ಸೋಮಸಮುದ್ರ ಲಿಂಗಾರೆಡ್ಡಿ, ಗೆಣಿಕೆಹಾಳು ಶರಣನಗೌಡ, ದರೂರು ಕ್ಯಾಂಪ್ ಶ್ರೀಕಾಂತ್‌ರಾವ್ ಕೃಕಾಲ್ಯಾ, ದೇವಸಮುದ್ರ ನಾಗೇಂದ್ರಪ್ಪ, ವಣೇನೂರು ಬಸವರಾಜಗೌಡ, ದೇವಸಮುದ್ರ ಲಿಂಗರಾಜ, ದರೂರು.ಪಿ.ವೀರೇಶಗೌಡ, ಹಂಪದೇವನಹಳ್ಳಿ ರಾಜಶೇಖರ, ಹೆಚ್.ವೀರಾಪುರ ಖಾಜಾಸಾಬ್, ಕೃಷ್ಣನಗರ ಶಿವಯ್ಯ, ಚನ್ನಪಟ್ಟಣ ಮಂಜುಗೌಡ, ಚನ್ನಪಟ್ಟಣ ಖಾಜಾ ವಲಿಸಾಬ್, ಸಂಗನಕಲ್ಲು ಗಾದಿಲಿಂಗನಗೌಡ, ಕೆ.ಮಂಜುನಾಥ, ಶ್ರೀಧರಗಡ್ಡೆ ವೀರನಗೌಡ, ಶಂಕರಬAಡೆ ರಾಜಶೇಖರಗೌಡ, ಮೋಕಾ ಸಣ್ಣ ಅಂಜಿನಪ್ಪ ನಾಯಕ, ಎಂ.ರಾಮಾAಜಿನಿ ನಾಯಕ, ಎಮ್ಮಿಗನೂರು ರಾಜಾಸಾಬ್, ರಾಮಚಂದ್ರ ನಾಯಕ್, ರಾಜಾಗೌಡ ಇದ್ದರು.