ಬೆಳಗಾವಿ. ಯರಗಟ್ಟಿ ತಾಲೂಕ ಪಿಕೆಪಿಎಸ್ ವತಿಯಿಂದ ಸ್ಪರ್ದಿಸಿದ್ದ ನನ್ನ ವಿರುದ್ಧ ಯಾರು ನಾಮಪತ್ರ ಸಲ್ಲಿಸದ ಪ್ರಯುಕ್ತ ನಾನು ಡಿಸಿಸಿ ಬ್ಯಾಂಕ ನಿರ್ದೇಶಕನಾಗಿ ಪ್ರಥಮ ಭಾರಿಗೆ ಆಯ್ಕೆ ಅಗಿದ್ದು ಇದ್ದಕ್ಕೆ ಕಾರಣ ಜಾರಕಿಹೊಳಿ ಸಹೋದರರು, ಸವದತ್ತಿ, ಯರಗಟ್ಟಿ ತಾಲೂಕಿನ ಜನತೆ, ಪಿಕೆಪಿಎಸ್ ಸದಸ್ಯರು ಹಾಗೂ ರೈತರು ಕಾರಣ ಎಂದರು.
ಯುವ ಮುಖಂಡ 3 ನೇ ಭಾರಿಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕನಾಗುವದು ಬಹುತೇಕ ಖಚಿತವಾಗಿರುವ ನೀಲಕಂಠ ಕಪ್ಪಲಗುದ್ದಿ ಮಾತನಾಡಿ ಸತತ ಮೂರು ಭಾರಿ ಡಿಸಿಸಿ ಬ್ಯಾಂಕಿಗೆ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಸಂತಸ ತಂದಿದ್ದು ನನ್ನ ಆಯ್ಕೆಗೆ ಜಾರಕಿಹೊಳಿ ಸಹೋದರರ ಸಹಕಾರ, ರೈತರ ವಿಶ್ವಾಸ ಕಾರಣ. ಮತ್ತು ಮುಂದಿನ ದಿನಗಳಲ್ಲಿ ರೈತರ ಪತ್ತು ಹೆಚ್ಚಳ, ಟ್ರಾಕ್ಟರ್ ಸಾಲ, ಪಿಕೆಪಿಎಸ್ ಬೆಳವಣಿಗೆಗೆ ಸದಾ ಕಾರ್ಯ ಮಾಡುತ್ತೇನೆ ಎಂದರು.