ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ :   ಶಿವಕುಮಾರ್ ರಾಜ್ಯಕ್ಕೆ ಪ್ರಥಮ 

Pratibha Boi
ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ :   ಶಿವಕುಮಾರ್ ರಾಜ್ಯಕ್ಕೆ ಪ್ರಥಮ 
WhatsApp Group Join Now
Telegram Group Join Now
ಬಳ್ಳಾರಿ. ಅ. 11: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ದೊಡ್ಡ ಬಳ್ಳಾಪುರದ ಅನಿಬೆಸೆಂಟ್ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ನಾನು ವಿಜ್ಞಾನಿ 2025 ರಾಜ್ಯಮಟ್ಟದ ಪ್ರಥಮ
ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ
 ಜಿಲ್ಲೆಯ  ಏಳು ವಿದ್ಯಾರ್ಥಿಗಳು ಭಾಗವಹಿಸಿ  ಯಶಸ್ಸು ಕಂಡಿದ್ದಾರೆ ಎಂದು ವೈಜ್ಞಾನಿಕ ಪರಿಷತ್ತಿನ ಆರ್ ಎಚ್ ಎಮ್ ಚನ್ನಬಸವಯ್ಯ ಸ್ವಾಮಿ ತಿಳಿಸಿದರು.
 ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಒಟ್ಟು 7 ವಿದ್ಯಾರ್ಥಿಗಳ ಪೈಕಿ ಸಿರುಗುಪ್ಪ ತಾಲೂಕಿನ ವಿವೇಕಾನಂದ ಶಾಲೆಯ ಶಿವಕುಮಾರ್ ಪ್ರಥಮ ಸ್ಥಾನವನ್ನು ಗಳಿಸಿದರು, ಮತ್ತು ತೀರದ ಸುಗಮ ಶಾಲೆಯ ವಿದ್ಯಾಸಾಗರ್ ಎಸ್ ಕೆ ಮೋದಿ ನ್ಯಾಷನಲ್ ಸ್ಕೂಲ್ ನ ವ ಜಾನವಿ, ಮತ್ತು ಸಂಜೀವ ಶೆಟ್ಟಿ, ಜ್ಞಾನಾಮೃತ ಶಾಲೆಯ ಮಹಮ್ಮದ್ ಸೊಹೈಲ್ ನಂದ ರೆಸಿಡೆನ್ಸಿಯಲ್ ಶಾಲೆಯ ಗವಿಸಿದ್ದಪ್ಪ ಬಳ್ಳಾರಿ , ದೇಶನೂರು ಶಾಲೆಯ ದೇವರಾಜು ಇವರುಗಳು  ” ನಾನು ವಿಜ್ನಾನಿ-2025″ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್‌ ತರಬೇತಿಯಲ್ಲಿ ಭಾಗವಹಿಸಿ  ಪ್ರತಿಷ್ಠಿತ ವರ್ಲ್ಡ ಆಫ್‌ ರೆಕಾರ್ಡ್ಸ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸ್ಥಾನ ಪಡೆದುಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳ ಪರಿಶ್ರಮ , ಸೃಜನಶೀಲತೆ ಮತ್ತು ವೈಜ್ಞಾನಿಕ ಸ್ಪೂರ್ತಿಯು ಪ್ರಶಂಸನೀಯವಾಗಿದೆ.  ಅಲ್ಲದೆ ಮಕ್ಕಳ, ಪೋಷಕರ ಮತ್ತು ಸಂಬಂಧಪಟ್ಟ ಶಾಲೆಗಳ ವಿದ್ಯಾ ಸಂಸ್ಥೆಗಳ ಮುಖಂಡರ , ಶಾಲೆಗಳ ಮುಖ್ಯಗುರುಗಳ ಹಾಗೂ ಶಿಕ್ಷಕ ಸಿಬ್ಬಂದಿಗಳ  ಅವಿಷ್ಕಾರದ ಚಿಂತನೆಗೆ   ನಮ್ಮ ಸಂಸ್ಥೆಯ  ಪರವಾಗಿ ಅಭಿನಂದನೆಗಳನ್ನು ಆರ್. ಎಚ್ ಚನ್ನಬಸಯ್ಯಸ್ವಾಮಿ ತಿಳಿಸಿದ್ದಾರೆ.
 ಈ ಪತ್ರಿಕಾಗೋಷ್ಠಿಯಲ್ಲಿ ಟೆಲಿಸ್ಕೋಪ್ ತಯಾರಿಕೆಯ ತರಬೇತಿ ಪಡೆದ ವಿದ್ಯಾರ್ಥಿಗಳು ಪೋಷಕರು ಮತ್ತು ಮಾರ್ಗದರ್ಶಕರಾದ ಶಿಕ್ಷಕರು ಇದ್ದರು.
 ಪ್ರಥಮ ಸ್ಥಾನ ಪಡೆದ ಶಿವಕುಮಾರ್ ಅವರು ಟೆಲಿಸ್ಕೋಪ್ ತಯಾರಿಕೆಯ ಬಗ್ಗೆ ಶಿಬಿರದಲ್ಲಿ ತರಬೇತಿ ಪಡೆದ ಪಡೆದ ಬಗ್ಗೆ ವಿವರವಾಗಿ ತಿಳಿಸಿದರು.
WhatsApp Group Join Now
Telegram Group Join Now
Share This Article