ಬೆಳಗಾವಿ: ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಇಲ್ಲಿನ ಗೋವಾವೆಸ್ ಮಹಾವೀರ ಭವನದಲ್ಲಿ ಅ.25 ಮತ್ತು 26 ರಂದು ನಡೆಯಲಿರುವ ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ಟ್ರೋಫಿಯನ್ನು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಅನಾವರಣಗೊಳಿಸಿದರು.
ಈ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿ, ಸತತ ಮೂರು ವರ್ಷಗಳಿಂದ ಆಯೋಜಿಸಲಾದ ಚೆಸ್ ಚೆಸ್ ಟೋರ್ನಾಮೆಂಟ್ ಗೆ ಉತ್ತಮ ಸ್ಪಂದನೆ ದೊರತ್ತಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ಕನಸುಗಳು ಸಾಕಾರಗೊಂಡಿದೆ. ರಾಷ್ಟ್ರೀಯ ಚೆಸ್ ಟೋರ್ನಾಮೆಂಟ್ ಆದರಿಂದ ಚಾಂಪಿಯನ್ಸ್ ಸ್ಪರ್ಧಾಳುಗಳು ಆಗಮಿಸುವ ಸಾಧ್ಯತೆ ಇದೆ. ಅವರಿಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಕ್ರೀಡಾ ತಂದೆಯವರು ಬಹಳಷ್ಟು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಚೆಸ್ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಉತ್ತರ ಕರ್ನಾಟಕ ಮಕ್ಕಳು ಬೆಳೆಯಲು ಇದೊಂದು ಅವಕಾಶವಿದೆ. ಹೆಚ್ಚಿನ ವಿದ್ಯಾರ್ಥಿಗಳು ಈ ಚೆಸ್ ಟೂರ್ನಮೆಂಟ್” ನಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ನೀವು ನಿಮ್ಮ ಮೊದಲ ಟೂರ್ನಮೆಂಟ್‌ನಲ್ಲಿ ಆಡಿದ ನಂತರ, ನಿಮಗೆ ರೇಟಿಂಗ್ ಸಿಗುತ್ತದೆ. ನೀವು ಗೆದ್ದಾಗ ಅದು ಹೆಚ್ಚಾಗುತ್ತದೆ, ನೀವು ಸೋತಾಗ ಅದು ಕಡಿಮೆಯಾಗುತ್ತದೆ ಮತ್ತು ನೀವು ಡ್ರಾ ಮಾಡಿದಾಗ ಅದು ನೀವು ಯಾರೊಂದಿಗೆ ಆಡಿದ್ದೀರಿ ಎಂಬುದರ ಮೇಲೆ ಅವಲಂಭಿತವಾಗಿರುತ್ತದೆ. ನೀವು ಬಲಿಷ್ಠ ಆಟಗಾರನನ್ನು ಸೋಲಿಸಿದರೆ ನೀವು ಬಹಳಷ್ಟು ಮೇಲೇರುತ್ತೀರಿ, ನೀವು ಬಲಿಷ್ಠ ಆಟಗಾರನ ವಿರುದ್ಧ ಆಟವಾಡಿದರೆ ಮುಂದಿನ ಪದ್ಯಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸುಲಭದ ದಾರಿ ಇದೊಂದು ಭವಿಷ್ಯತ್ತಿನ ಪಂದ್ಯಗಳು ಮಕ್ಕಳು ಗೆದ್ದು ಟ್ರೋಫಿ ಎತ್ತಿ ಹಿಡಿಯಲಿ ಎಂದರು. ಈ ಸಂದರ್ಭದಲ್ಲಿ ಇಮ್ರಾನ್ ತಪ್ಪಕೀರ್, ಪಾಡುರಂಗ ರಂಗಸುಭೆ, ದಿಕ್ಷಿತಾ ಪೂಜಾರಿ ಹಾಗೂ ಇತರರು ಇದ್ದರು.