ರೋಗಿಯ ಯೋಗೇಕ್ಷೇಮ ವೈದ್ಯನ ನಡವಳಿಕೆ, ಬದ್ದತೆ, ಸಂವಹನದ ಮೇಲೆ ಅವಲಂಬಿತ : ಡಾ.ಸಿದ್ದಲಿಂಗೇಶ ಕುದರಿ

Ravi Talawar
ರೋಗಿಯ ಯೋಗೇಕ್ಷೇಮ ವೈದ್ಯನ ನಡವಳಿಕೆ, ಬದ್ದತೆ, ಸಂವಹನದ ಮೇಲೆ ಅವಲಂಬಿತ : ಡಾ.ಸಿದ್ದಲಿಂಗೇಶ ಕುದರಿ
WhatsApp Group Join Now
Telegram Group Join Now

ಬಾಗಲಕೋಟೆ: ರೋಗಿಯ ಯೋಗೇಕ್ಷೇಮ ವೈದ್ಯನ ನಡವಳಿಕೆ, ಬದ್ದತೆ ಮತ್ತು ಸಂವಹನ ಮುಂತಾದ ಆದರ್ಶ ಗುಣಗಳ ಮೇಲೆ ಅವಲಂಬಿತವಾಗಿದೆ ಎಂದು ನವದೆಹಲಿಯ ಭಾರತೀಯ ವೈದ್ಯ ಪದ್ದತಿ ರಾಷ್ಟ್ರೀಯ ಆಯೋಗದ ಬೋರ್ಡ ಆಪ್ ಆಯುರ್ವೇದದ ಅಧ್ಯಕ್ಷರಾದ ಡಾ.ಸಿದ್ದಲಿಂಗೇಶ ಕುದರಿ ಹೇಳಿದರು.
ಅವರು ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಿ.ವಿ.ವಿ.ಎಸ್. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಶುಕ್ರವಾರ ಬಿ.ವಿ.ವಿ.ಸಂಘದ ನೂತನ ಸಭಾಭವನದಲ್ಲಿ ಸಮಾವರ್ತನ-೨೦೨೫ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪದವಿ ಪ್ರಧಾನ ಮಾಡಿ ಮಾತನಾಡಿದ ಅವರು ಶಿಕ್ಷಣವನ್ನು ಕೇವಲ ಕಾಲೇಜಿನಲ್ಲಿ ಪಡೆದರಷ್ಟೆ ಸಾಲದು, ಜಿವನದಲ್ಲಿ ಕಲಿಯುದೆಲ್ಲವೂ ಶಿಕ್ಷಣವೆ ಆಗಿದೆ, ಹಾಗಾಗಿ ವೈದ್ಯಕಿಯ ವೃತ್ತಿಯಲ್ಲಿ ನಿರಂತರ ಕಲಿಕೆ ಅಗತ್ಯ,ವೈದ್ಯರ ಯಶಸ್ಸು ಇರುವುದು ಅವರ ವೃತ್ತಿಯನ್ನು ಗೌರವಿಸುವುದು, ಪ್ರೀತಿಸುವುದು, ನಗುಮುಖದಿಂದ ಸೇವೆ ಮಾಡುವುದು ಮತ್ತು ತೃಪ್ತಿಭಾವ ಹೊಂದುವುದರಲ್ಲಿ ಅಡಗಿದೆ, ರೋಗಿಯ ಯೋಗೇಕ್ಷೇಮ ವೈದ್ಯನ ನಡವಳಿಕೆ, ಬದ್ದತೆ ಮತ್ತು ಸಂವಹನ ಮುಂತಾದ ಆದರ್ಶ ಗುಣಗಳ ಮೇಲೆ ಅವಲಂಬಿತವಾಗಿದೆ ಎಂದ ಅವರು ೬ನೇ ಹಾಗೂ ೧೧ ತರಗತಿಯ ಮಕ್ಕಳಲ್ಲಿ ಕೇಂದ್ರ ಸರಕಾರ ಆಯುರ್ವೇದ ಬಗ್ಗೆ ಪಾಠಗಳನ್ನು ಅಳವಡಿಸಿದೆ, ಉದ್ಯೋಗ ಹುಡುಕುವುದಲ್ಲ, ನಾವೆ ಉದ್ಯೋಗ ಸೃಷ್ಟೀಸಬೇಕು ಎಂದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರು ಮಾತನಾಡಿ, ವೈದ್ಯ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದ್ದು, ರೋಗಿಗಳೇ ನಿಮ್ಮ ಶಿಕ್ಷಕರು, ನಿಮ್ಮ ಬುದ್ದಿವಂತಿಕೆಗಿಂತ ಹೃದಯವಂತಿಕೆ ಬಹಳ ಮುಖ್ಯ ಮತ್ತು ವೈದ್ಯಕೀಯ ಕೇತ್ರದಲ್ಲಿ ತಪ್ಪು ಮಾಡಲು ಅವಕಾಶವೇ ಇಲ್ಲ, ರೋಗಿಗಳ ಸೇವೆಯನ್ನು ಮಾನವಿಯ ದೃಷ್ಟಿಯಿಂದ ನೀಡಬೇಕು, ಪ್ರಧಾನಮಂತ್ರಿ ಮೋದಿಯವರು ಆಯುರ್ವೆದ ವೈದ್ಯಕಿಯ ಕ್ಷೇತ್ರಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಅರಿತು ಅದರ ಪ್ರಯೋಜನವನ್ನು ಪಡೆದು ಜನರ ಸೇವೆ ಮಾಡಿರಿ ಎಂದರು.
ಪ್ರಭಾರಿ ಪ್ರಾಚಾರ್ಯರಾದ ಡಾ.ಎಮ್.ಎಸ್.ಹಿರೇಮಠ ಅವರು ಪ್ರಸ್ತಾವಿಕ ಮಾತನಾಡಿದರು ಸಂಘದಗೌರವ ಕಾರ್ಯದರ್ಶಿಗಳಾದ ಮಹೇಶ ಎನ್. ಅಥಣಿ ಹಾಗೂ ಬಿವಿವಿಎಸ್‌ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ. ಎಸ್. ಸಾಸನೂರ ಇವರು ಉಪಸ್ಥಿತರಿದ್ದರು,
ಪದವಿ ಪ್ರದಾನ: ಒಟ್ಟು ೮೭ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.. ಡಾ.ವೀಣಾ ನಂದೆನ್ನವರು, ಡಾ.ಚೈತ್ರಾ ನಡುವಿನಮನಿ, ಡಾ.ಪುನೀತ್ ಫಾಠಗೆ ಮತ್ತು ಡಾ.ಪ್ರಮೋದ ಎನ್.ಅವರು ನಿರೂಪಿಸಿದರು. ಆರ್.ದೇಶಪಾಂಡೆ ಸ್ವಾಗತಿಸಿದರು, ಡಾ.ಜಿ.ಎಸ್.ಕುಲಕರ್ಣಿ ಅವರು ಪದವಿಧರರಿಗೆ ಪ್ರತಿಜ್ಞಾವಿಧಿ ಭೋಧಿಸಿದರು, ಡಾ.ಆರ್.ಆಯ್.ಜಂಬಗಿ ವಂದಿಸಿದರು,

 

 

 

WhatsApp Group Join Now
Telegram Group Join Now
Share This Article