ನವದೆಹಲಿ, ಅಕ್ಟೋಬರ್ 11: ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ತಾಲಿಬಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಖಿ, ಭಾರತವನ್ನು ಅಫ್ಘಾನಿಸ್ತಾನದಂತೆ ನಡೆಸಿಕೊಂಡಿದ್ದಾರೆ. ಅವರು ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಪಾಲ್ಗೊಳ್ಳಲು ಅವಕಾಶವನ್ನೇ ನೀಡಿರಲಿಲ್ಲ. ಭಾರತಕ್ಕೆ ಬಂದು ಅಫ್ಘಾನ್ ಕಾನೂನು ಹೇರಲು ಮುತ್ತಖಿ ಯಾರು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಮಹಿಳಾ ಪತ್ರಕರ್ತರು ಸೇರಿದಂತೆ ಹಲವಾರು ನಾಯಕರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ದೇಶದ ಮೇಲೆ, ವಿಶೇಷವಾಗಿ ನಮ್ಮ ಸ್ವಂತ ನೆಲದಲ್ಲಿ ತನ್ನ ಷರತ್ತುಗಳನ್ನು ಹೇರಲು ಮುತ್ತಖಿ ಯಾರು ಎಂದು ಕೇಳಲಾಗುತ್ತಿದೆ.