ಜಿಲ್ಲಾಧಿಕಾರಿ ಕಛೇರಿ ಎದುರು ಹೋಮ ಮಾಡುವ ಮೂಲಕ ಬಿಜೆಪಿ ಧರಣಿ 

Ravi Talawar
 ಜಿಲ್ಲಾಧಿಕಾರಿ ಕಛೇರಿ ಎದುರು ಹೋಮ ಮಾಡುವ ಮೂಲಕ ಬಿಜೆಪಿ ಧರಣಿ 
WhatsApp Group Join Now
Telegram Group Join Now
ಧಾರವಾಡ: ಹುಬ್ಬಳ್ಳಿಯ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಖುರಾನ್ ಪಠಣ ಮಾಡಿರುವುದನ್ನು ಖಂಡಿಸಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಮುಲ್ಲಾ ಮೋಕ್ಷ ಹೋಮ ಎಂಬ ಫಲಕ ಹಿಡಿದು ಅರ್ಚಕರಿಂದ ಹೋಮ ಮಾಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಧರಣಿ ನಡೆಸಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್‌ನಲ್ಲಿ ತಮ್ಮ ಭಾವಚಿತ್ರ ಹಾಕಿಕೊಂಡಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಖುರಾನ್ ಪಠಣ ಮಾಡುವ ಮೂಲಕ ಒಂದು ಸಮುದಾಯವನ್ನು ಓಲೈಸುವ ಕೆಲಸ ಮಾಡಲಾಗಿದೆ. ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ ಈ ಕಾರ್ಯಕ್ರಮದಲ್ಲಿ ವರ್ತಿಸಿದ್ದಾರೆ. ಇವರ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸನಾತನ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕಿದ ಕಾರ್ಯಕರ್ತರು, ಸರ್ಕಾರಿ ಕಚೇರಿ ಶುದ್ದೀಕರಣಕ್ಕಾಗಿ ರುದ್ರಪಠಣ ಮಾಡುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರೇ ಅರ್ಚಕರಿಂದ ಹೋಮ ಮಾಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಯಲ್ಲಿ   ಶಾಸಕರಾದ  ಅರವಿಂದ ಬೆಲ್ಲದ.ಹಾಗು ಸೀಮಾ ಮಸೂತಿ,ಜಿಲ್ಲಾದ್ಯಕ್ಷರಾದ ತಿಪ್ಪಣ ಮಜ್ಜಗಿ, , ಶಿವು ಹೀರೆಮಠ, ವಿಜಯಾನಂದ ಶಟ್ಟಿ, ಸಂಜಯ ಕಪಟಕರ, ಶಿವು ಮೇಣಶಿನಕಾಯಿ,  ಮಂಜುನಾಥ ಮಲ್ಲಿಗವಾಡ, ಮೋಹನ ರಾಮದುರ್ಗ, ಬಸವರಾಜ ಗರಗ,  ಶ್ರೀನಿವಾಸ ಕೊಟ್ಯಾನ,  ಮಂಜುನಾಥ ಕಾಟಕರ, ಎಲ್ಲಪ್ಪ ಸವನೂರ, ಆನಂದ ಯಾವಗಲ, ವಿಷ್ಣು ಕೊರಳ್ಳಿ, ಸುರೇಶ ಬೇದರೆ ಬಸವರಾಜ ಬಾಳಗಿ,ಪ್ರಣಿತ ರಾಮನಗೌಡರ ,ಬಸವರಾಜ ಮೂತ್ತಳಿ,ಸುನೀಲ ಮೋರೆ, ಮಂಜುನಾಥ ಬಟ್ಟಣನವರ,  ಅಶೋಕ ವಾಲಿಕಾರ,ರಮೇಶ ದೊಡವಾಡ, ಮಂಜುನಾಥ ಹೆಸರುರ,  ಅರುಣ ಅರಕೆರಿ, ಸದಾಶಿವ ಭಜಂತ್ರಿ, ಪ್ರಮೂದ ಕಾರಕೊನ,  ಪ್ರಮೂದ ಬಾಗಿಲದ,ಅಮಿತ ಪಾಟಿಲ್,  ಪುಷ್ಪಾ ನವಲಗುಂದ, ಗೀತಾ ಪಾಟಿಲ್, ಮಾಲತಿ ಹುಲಿಕಟ್ಟಿ,ಚಂದ್ರಕಲಾ ಕೊಟಬಾಗಿ, ಸುನಿತಾ ಮಳ್ಳಕರ, ನೀಲವ್ವ ಅರವಾಳದ,  ಪುಷ್ಪಾ ಮಜ್ಜಗಿ, ಶೋಭಾ ಭೋಜಂಗನವರ, ರೊಪಾ ಚೌದರಿ, ಹಾಗು ಅನೇಕ ಉಪಸ್ಥಿತರಿದರು.
WhatsApp Group Join Now
Telegram Group Join Now
Share This Article