ಸಿಜೆಐ ಮೇಲಿನ ಶೂ ಎಸೆತ ಖಂಡಿಸಿ ಅಂಜುಮನ್‌ ಇಸ್ಲಾಂ ಕಮಿಟಿ ಪ್ರತಿಭಟನೆ

Ravi Talawar
ಸಿಜೆಐ ಮೇಲಿನ ಶೂ ಎಸೆತ ಖಂಡಿಸಿ ಅಂಜುಮನ್‌ ಇಸ್ಲಾಂ ಕಮಿಟಿ ಪ್ರತಿಭಟನೆ
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
WhatsApp Group Join Now
Telegram Group Join Now

 

ಮಹಾಲಿಂಗಪುರ: ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ವಕೀಲನೋರ್ವ ನ್ಯಾಯಾಲಯದಲ್ಲಿಯೇ ಶ್ಯೂ ಎಸೆದಿರುವುದನ್ನು ಖಂಡಿಸಿ ಮೋಹ್ಮದೀಯಾ ಅಂಜುಮನ್ ಎ ಇಸ್ಲಾಂ ಕಮೀಟಿ ವತಿಯಿಂದ ಶುಕ್ರವಾರ ಮಧ್ಯಾಹ್ನ ಮಹಾಲಿಂಗಪುರ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಧರ್ಮ ಗುರು ಅಸ್ಲಂ ಅತ್ತರವಾಲೆ ಮಾತನಾಡಿ, ಸರ್ವ ಸ್ವತಂತ್ರ ಭಾರತ ದೇಶಕ್ಕೆ ಸಂವಿಧಾನವೇ ಶ್ರೇ?ವಾಗಿದೆ.ಇವತ್ತೆನಾದರೂ ಸ್ವಾತಂತ್ರ್ಯದ ಮುಕ್ತ ಗಾಳಿ ಏನಾದರೂ ತೆಗೆದುಕ್ಕೊಳ್ಳುತ್ತಿದ್ದೇವೆ ಅಂದರೆ ಅದಕ್ಕೆ ಸಂವಿಧಾನವೇ ಕಾರಣ.
ಈ ವ್ಯವಸ್ಥೆ ಹದಗೆಡಿಸಿ ಮತ್ತೊಮ್ಮೆ ಬ್ರಿಟಿ? ಸರ್ವಾಧಿಕಾರಿ ಧೋರಣೆ ನಮ್ಮೆಲ್ಲರ ಮೇಲೆ ಹೇರುವ ಪ್ರಯತ್ನ ನಡೆದಿದೆ. ದೇಶದ ಪ್ರತಿ ಸಮುದಾಯದ ಜನತೆ ಹೀಗೆ ಮೌನ ವಹಿಸುತ್ತ ಸಾಗಿದರೆ ಭವಿ?ದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈ ಮೇಲಾಗಿ ನಾವು ಅವರ ಗುಲಾಮರಾಗ ಬೇಕಾಗುತ್ತದೆ, ಕಾಲ ಮಿಂಚಿ ಹೋಗುವ ಮೊದಲು ಜನ ಎಚ್ಚೆತ್ತುಕ್ಕೊಂಡು ದುರದೃ?ಕರವಾಗಿ ನಡೆದಿರುವ ಪ್ರಕರಣದ ವಿರುದ್ಧ ಖಂಡಿಸಬೇಕು ಎಂದರು.
ಅಕ್ಟೋಬರ್ ೬ ರಂದು ನ್ಯಾಯಾಲಯ ಕಲಾಪ ನಡೆದಾಗ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ, ನ್ಯಾಯಾಧೀಶರು ಖಜೂರಾಹೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪರ ನಿಲುವು ಪ್ರಕಟಿಸಿಲ್ಲ ಎಂಬ ಅಸಮಾಧಾನ ಹೊರಹಾಕಿ ನ್ಯಾಯಾಲಯದಲ್ಲಿಯೇ ’ಶ್ಯೂ’ ಎಸೆದು ಅವಮಾನಗೊಳಿಸಿರುವ ಪ್ರಕರಣ ಇದಾಗಿದೆ.
ಈ ಕೃತ್ಯವನ್ನು ಖಂಡಿಸುವ ಸಲುವಾಗಿ ಮಹಾಲಿಂಗಪುರ ಪಟ್ಟಣದ ಮುಸ್ಲಿಂ ಬಾಂಧವರು ರಾಣಿ ಚೆನ್ನಮ್ಮ ವೃತ್ತದಿಂದ ಪುರಸಭೆ ವರೆಗೆ ಮೌನ ಮೆರವಣಿಗೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಅಧಿಕಾರಿ ಸಿ. ಎಸ್. ಮಠಪತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ನಿಯಾಝ್ ಪಟೇಲ್, ನಜೀರ್ ಝಾರೆ, ಸಯ್ಯದ್ ಯಾದವಾಡ, ಜಮೀರ್ ಯಕ್ಸಂಬಿ, ಮೀರಾ ತಟಗಾರ, ಸಿರಾಜ್ ಪೆಂಡಾರಿ, ಸಿರಾಜ್ ಮುಜಾವರ, ಪೈಗಂಬರ್ ಪೆಂಡಾರಿ, ಮೌಲಾ ಮೋಮಿನ, ಯುನೂಸ್ ಬಿಳಗಿ, ಸಯ್ಯದ್ ನದಾಫ್, ಯಾಸೀನ್ ಐನಾಪೂರ, ಬಾಬು ಪೆಂಡಾರಿ, ಯಾಸೀನ್ ಬಳಗಾರ, ರಾಜೇಸಾಬ ಐನಾಪೂರ, ಬಾಬು ಸನದಿ, ಫಕ್ರುದ್ದೀನ್ ಚನ್ನಾಳ ಮುಂತಾದವರಿದ್ದರು.

WhatsApp Group Join Now
Telegram Group Join Now
Share This Article