ಯರಗಟ್ಟಿ,ಅ.೧೦: ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸೇವಾ ಸಂಘ, ಕರ್ನಾಟಕ ರಾಜ್ಯ ಪರಿ?ತ್ತಿನ ೨೦೨೪-೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಧಾರವಾಡದ ಹನುಮಂತಪ್ಪ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ಇತ್ತಿಚೆಗೆ ಜರುಗಿತು.
ರಾಜ್ಯದ ಕಾರ್ಯದರ್ಶಿಯವರಾದ ಪಿ.ಪಿ. ಮುರಳಿಧರನ್, ಮಾತನಾಡಿದ ಅವರು ಪ್ರತಿ ವ? ಕಾರ್ತಿಕ ಮಾಸದಲ್ಲಿ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಂದಿಂದ ಶಬರಿಮಲೈಯಲ್ಲಿ ಅನ್ನದಾಸೋಹ ಮಾಡುವುದು ಮೂಲ ಉದ್ದೇಶವಾಗಿದೆ. ಸಂಘದಿಂದ ಪ್ರತಿ ತಿಂಗಳುಗಳನ್ನು ಒಳಗೊಂಡಂತೆ ಪ್ರತೀ ವ?ವೂ ಮಂಡಲ ವ್ರತ ಕಾಲದಲ್ಲಿ ಆರೋಗ್ಯ (ಮೇಡಿಕಲ್) ಸೇವೆ, ಕುಡಿಯುವ ನೀರಿನ ಸೇವೆ, ಅಸ್ತವ್ಯಸ್ತರಾದ ಭಕ್ತರನ್ನು ಸ್ಟ್ರೆಚ್ಚರ್ ಮೂಲಕ ಆಸ್ಪತ್ರೆಗೆ ಅತಿಶೀಘ್ರದಲ್ಲಿ ಹೆಗಲಮೇಲೆ ಹೊತ್ತು ತಲುಪಿಸುವ ಸೇವೆಯನ್ನು ಸತತ ೮೦ ವ?ಗಳಿಂದ ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪನ ಸನ್ನಿಧಾನದಲ್ಲಿ ನಮ್ಮ ಸಂಘ ತೊಡಗಿದೆ ಎಂದು ಹೇಳಿದರು.
ನಂತರ ರಾಜ್ಯ ಖಜಾಂಚಿ ಕೆ. ನಾರಾಯಣ ಗುರುಸ್ವಾಮಿ ಮಾತನಾಡಿ ಭಗವಂತನ ಸೇವೆಯೆಂದರೆ ೪೧ ದಿನಗಳ ಕಠಿಣ ವ್ರತ ಮತ್ತು ಅನ್ನದಾಸೋಹದ ಮೂಲಕ ಅಯ್ಯಪ್ಪ ಸ್ವಾಮಿಯ ಸೇವೆಮಾಡಿದರೆ ಸಕಲ ಸಿದ್ಧಿ ಸಿಗುತ್ತದೆ ಎಂದು ಹೇಳಿದರು.ಈ ವೇಳೆ ರಾಜ್ಯಾಧ್ಯಕ್ಷರಾದ ಕೆ. ರಮೇಶ್, ರಾಜ್ಯ ಉಪಾಧ್ಯಕ್ಷರಾದ ಪಿ. ಬಿ. ಸುಬ್ರಹ್ಮಣ್ಯಂ, ರೇವಪ್ಪ ರೆಡ್ಡಿ, ವೀರೇಂದ್ರ ಪ್ರಸಾದ, ಜಿ. ಬಾಲಮುರುಗನ್, ವಿರೂಪಣ್ಣ ಗುಡಿ, ವಿರೇಶ್ ಕಲಬುರ್ಗಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮುರಳಿ ಮೋಹನ್ ಡಿ.ಎನ್, ಮಹಾಂತೇಶ್ ಗೊನ್ನಾಗರ, ಕೆ. ಟಿ. ಗಿರೀಶ್, ಎಂ. ಸುಬ್ರಹ್ಮಣ್ಯ, ಕೆ. ಎಂ. ಗೋಪಿ ಸೇರಿದಂತೆ ಬೆಳಗಾವಿ, ಧಾರವಾಡ, ಗದಗ, ವಿವಿಧ ಜಿಲ್ಲೆಗಳ ಮಾಲಾದಾರಿಗಳು ಅನೇಕರು ಇದ್ದರು.