ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವುದು ಅವಶ್ಯ : ರಾಮಪ್ಪ ಎಲ್.ಕೆ

Pratibha Boi
ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವುದು ಅವಶ್ಯ : ರಾಮಪ್ಪ ಎಲ್.ಕೆ
WhatsApp Group Join Now
Telegram Group Join Now

ಇಂಡಿ: ಮಕ್ಕಳಲ್ಲಿ ರಾ?ಪ್ರೇಮ, ದೇಶಭಕ್ತಿ ಬೆಳೆಸುವುದು ಅವಶ್ಯಕವಾಗಿದೆ. ದೇಶದ ಭದ್ರತೆಗೆ ಯೋಧರು ಮಾಡುತ್ತಿರುವ ತ್ಯಾಗ ಬಲಿದಾನ ಅಪಾರ’ ಎಂದು ವಿಜಯಪುರದ ಮಾಜಿ ಸೈನಿಕರ ಅಧ್ಯಕ್ಷ ರಾಮಪ್ಪ ಎಲ್.ಕೆ ಹೇಳಿದರು.
ಗುರುವಾರ ತಾಲೂಕಿನ ಆಳೂರ ಗ್ರಾಮದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ೫೫ನೇ ವರ್ಷದ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಸೈನಿಕರ ಮೇಲೆ ‘ಶತ್ರುಗಳು ಆಕ್ರಮಣ ಮಾಡುವುದೇ ರಾತ್ರಿ ವೇಳೆ. ಹಾಗಾಗಿ, ಹಗಲಿರುಳೂ ಪ್ರತಿಯೊಬ್ಬ ಯೋಧರೂ ಜಾಗೃತರಾಗಿ ದೇಶ ಕಾಯುತ್ತೆವೆ. ಪ್ರತಿಯೋಬ ಸೈನಿಕನು ತಮ್ಮ ತಮ್ಮ ಕುಟುಂಬಗಳನ್ನು ತ್ಯಾಗಮಾಡಿ ದೇಶ ಸೇವೆಯಲ್ಲಿದ್ದು ಭಾತಾಂಬೆಯನ್ನು ನಮ್ಮ ಹೃದಯದಲ್ಲಿಟ್ಟು ಪೂಜಿಸುತ್ತೇವೆ. ಇಂದಿನ ಯುವಕರು ದೇಶ ಸೇವೆಗೆ ಮುಂದಾಗಬೇಕು ಎಂದರು.
ಶಿವಯೋಗಾಶ್ರಮ ಸಿದ್ಧಾರೂಢ ಮಠದ ಶಂಕರಾನಂದ ಮಾಹಾಸ್ವಾಮಿಗಳು, ಕಲರ್ಬುಗಿಯ ಸಿದ್ಧಾರೂಢ ಮಠದ ಲಕ್ಷ್ಮೀದೇವಿ ತಾಯಿವರು, ಶ್ರೀಶೈಲ ಅರ್ಜುಣಗಿ, ತುಕರಾಮ ಬೇವನೂರ, ಬಸವರಾಜ ಅರ್ಜುಣಗಿ, ನಂದಬಸು ನುಚ್ಚಿ, ಅಶೋಕ ಬಳಬಟ್ಟಿ, ರಾಮು ಯಂಕಣಚಿ, ಯಲಗೊಂಡ ಬೇವನೂರ, ಖಾಜು ಸಿಂಗೆಗೋಳ, ರಾಚಪ್ಪ ಕಲಶೇಟಿ, ಎಸ್.ಎಂ.ಬಿರಾದಾರ, ಎ.ಎಸ್.ಗಾಣಿಗೇರ, ಪ್ರಕಾಶ ಲೋಣಿ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಮಾಜಿ ಸೈನಿಕರುನ್ನು ಹಾಗೂ ಮಾಧ್ಯಮದವರನ್ನು ಸನ್ಮಾನಿಸಲಾಯಿತ್ತು.
ಸುರೇಶ ನಾಟೀಕಾರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article