ಜಮಖಂಡಿ :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಮತ್ತು ವಿಜಯ ದಶಮಿ ವಾರ್ಷಿಕೋತ್ಸವದ ನಿಮಿತ್ತ ಅ .11 ಶನಿವಾರ ದಂದು ನಡೆಯಲಿರುವ ಬೃಹತ ಪಥಸಂಚಲನಕ್ಕೆ ಜಮಖಂಡಿ ನಗರ ಕೇಸರಿಮಯವಾಗಿದೆ. ಆರ್‌ಎಸ್‌ಎಸ್ ನ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ನಡೆಯಲಿರುವ ಪಥ ಸಂಚಲನಕ್ಕಾಗಿ ನಗರದಲ್ಲೇಡೆ ಕೇಸರಿ ತೋರಣ, ದೇಶದ ವೀರರ, ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರಗಳು, ಸ್ವಾಗತ ಕಮಾನಗಳು ನಗರದಾದ್ಯಂತ ರಾಜಾಜಿಸುತ್ತಿವೆ, ಶನಿವಾರ ದಂದು ನಡೆಯಲಿರುವ ಪಥ ಸಂಚಲನ ದಲ್ಲಿ ಸುಮಾರು 10 ಸಾವಿರ ಗಣವೇಶಧಾರಿಗಳು ಭಾಗವಹಿಸಲಿದ್ದಾರೆ .ಬ್ಯಾಕ್ಸ1
ಪೋಲಿಸ ಸರ್ಪಗಾವಲು :ತಥಸಂಚಲನದ ಹಿನ್ನೆಲೆಯಲ್ಲಿ ಪೊಲೀಸ ಇಲಾಖೆಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೆಡ್ ಗಳನ್ನು ಅಳವಡಿಸಲಾಗಿದೆ. ಐವರು ಡಿಎಸ್ಪಿ , 8 ಜನ ಸಿಪಿಐ, 20 ಜನ ಪಿಎಸ್ಐ ಸೇರಿದಂತೆ 400ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಡಿಎಆರ್ ತುಕಡಿಗಳನ್ನು ಬಂದೋಬಸ್ತೆಗೆ ನಿಯೋಜಿಸಲಾಗಿದೆ. ಡ್ರೋಣ ಕ್ಯಾಮೆರಾಗಳ ಮೂಲಕವು ಜನರ ಚಲನವಲನದ ಮೇಲೆ ನಿಗಾವಹಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ ಅವರ ನೇತೃತ್ವದಲ್ಲಿ ಭದ್ರತೆಗೆ ಏರ್ಪಾಡು ಮಾಡಿಕೊಳ್ಳಲಾಗಿದೆ.
ಸ್ಥಳ ಬದಲಾವಣೆನಗರದ ಪೊಲೋ ಮೈದಾನದಲ್ಲಿ ನಡೆಯಬೇಕಿದ್ದ ಪಥಸಂಚಲನದ ಸಮಾರೋಪ ಸಮಾರಂಭ ನಗರದ ನಮಸ್ಕಾರ ಮಂಡಲಿ ಆವರಣಕ್ಕೆ ಸ್ಥಳಾಂತರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೋ ಮೈದಾನದ ಮತ್ತೊಂದು ಕಾರ್ಯಕ್ರಮವಿದ್ದು ಖಾಲಿ ಇರದ ಕಾರಣ ಅನಿವಾರ್ಯವಾಗಿ ಸ್ಥಳ ಬದಲಾಯಿಸಲಾಗಿದ್ದು ನಮಸ್ಕಾರ ಮಂಡಲಿಯ ಮೈದಾನದಲ್ಲಿ ಸಮಾರೋಪ ನಮಾರಂಭ ನಡೆಯಲಿದೆ.