ಕ್ರೀಡೆಗಳು ಮಾನಸಿಕ ದೈಹಿಕ ಬೆಳವಣಿಗೆಗೆ ಸಹಕಾರಿ: ಸುನೀಲ್  ಹನ್ನಮಣ್ಣನವರ್

Ravi Talawar
ಕ್ರೀಡೆಗಳು ಮಾನಸಿಕ ದೈಹಿಕ ಬೆಳವಣಿಗೆಗೆ ಸಹಕಾರಿ: ಸುನೀಲ್  ಹನ್ನಮಣ್ಣನವರ್
WhatsApp Group Join Now
Telegram Group Join Now

ಬೆಳಗಾವಿ: ಕ್ರೀಡಾ ಚಟುವಟಿಕೆಗಳು ದೈಹಿಕ ಚಟುವಟಿಕೆಗಳ ಜತೆಗೆ ಮಾನಸಿಕ ಆರೋಗ್ಯ ಉತ್ತಮ ಪಡಿಸಲಿದೆ. ಮನರಂಜನೆಯ ಜತೆಗೆ ದೈಹಿಕ ಆರೋಗ್ಯಕ್ಕೂ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಉಪಾಧ್ಯಕ್ಷರಾದ  ಸುನೀಲ್  ಹನ್ನಮಣ್ಣನವರ್ ಹೇಳಿದರು.

ನಗರದ ಜಿಲ್ಲಾ  ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಾ.ಕ.ರ.ಸಾ.ಸಂಸ್ಥೆ ಬೆಳಗಾವಿ ವಿಭಾಗದ 2025-26ನೇ ಸಾಲಿನ ವಿಭಾಗ ಮಟ್ಟದ ಕ್ರೀಡಾ ಮತ್ತು ಕಲಾ ಚಟುವಟಿಕೆಗಳ ಸ್ಪರ್ಧೆಯ ಕ್ರೀಡಾಕೂಟ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಅವರು ಮಾತನಾಡಿದರು.

ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಇಂತಹ ಕ್ರೀಡೆಯನ್ನು ರೂಪಿಸಿಕೊಳ್ಳಬೇಕು.ಮನುಷ್ಯ ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಅದು ಅವನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆಯಲ್ಲದೆ, ಅವನ ಮನಸ್ಸು ಸದೃಢವಾಗಿಡಲು ಸಹಕರಿಸುತ್ತದೆ. ಮತ್ತು
ಕ್ರೀಡೆಗಳು ಮನುಷ್ಯರಿಗೆ ಮಾನಸಿಕ, ದೈಹಿಕ ಬೆಳವಣಿಗೆಗೆ ಜೊತೆಗೆ ಒತ್ತಡ ಬದುಕಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ನಿತ್ಯವೂ ನೂರಾರು ಕಿಲೋಮೀಟರ್ ಪ್ರಯಾಣ ಬೆಳೆಸುತ್ತೆವೆ ಅದರಲ್ಲಿ ಪ್ರಯಾಣಿಕರ ಜೊತೆ ಅನ್ಯೋನ್ಯತೆಯಿಂದ ಇರಬೇಕು. ಇವೆಲ್ಲವನ್ನು ಸಂಬಾಳಿಸಿಕೊಂಡು ಸುರಕ್ಷತೆದೆಡೆ ಸಾಗಬೇಕಾದರೆ ಮನಸ್ಸು ಬಹಳಷ್ಟು ‌ಹತ್ತೊಟ್ಟಿಯಲ್ಲಿ ಇರಬೇಕು. ಹೀಗಾಗಿ ಕ್ರೀಡೆಗಳು ಆಡಿದಾಗ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ‌ನೀಡುತ್ತೆವೆ ಎಂದರು.

ಅಧ್ಯಕ್ಷತೆಯನ್ನು ವಿಭಾಗದ  ವಿಭಾಗೀಯ ನಿಯಂತ್ರಣಾಧಿಕಾಗಳಾದ  ಕೆಂಪಣ್ಣ ಗುಡೆನ್ನವರ ರವರು  ವಹಿಸಿದ್ದರು.   ಅಧಿಕಾರಿಗಳಾದ  ನಿತಿನ್ ಗಡದೆ, ದೇವಕ್ಕ ನಾಯಕ್, ನಾರಾಯಣ ತಿಮ್ಮರೆಡ್ಡಿ, ಸಂಜಯ ಮಾಸುಮಳೆ, ನಾಗಮಣಿ ಭೋವಿ, ದಶರಥ ಕೆಳಗೇರಿ, ಸರ್ವೇಶ್.ಆರ್.,  ಸುನೀತಾ ಜೋಶಿ, ಸಂಜಯ್ ರಾಜೇಶ್, ಶಶಿಕಾಂತ್ ಹಂಚಿನಾಲ್ಕರ್,  ಸಂತೋಷ್ ಬೆನಕಿನಕೊಪ್ಪ, ಹಾಗೂ ಕ್ರೀಡಾ ಮತ್ತು ಕಲಾ ಸಮಿತಿಯ ಸದಸ್ಯರಾದ  ಸುರೇಶ ಯರಡ್ಡಿ ಮತ್ತು  ಉಮೇಶ್ ಹಾಗೂ ವಿಭಾಗದ ಎಲ್ಲಾ ಕ್ರೀಡಾಪಟುಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article