ಕಸದ ರಾಶಿ ತೆರವಿಗೆ ಸಾರ್ವಜನಿಕರ ಆಗ್ರಹ

Ravi Talawar
ಕಸದ ರಾಶಿ ತೆರವಿಗೆ ಸಾರ್ವಜನಿಕರ ಆಗ್ರಹ
WhatsApp Group Join Now
Telegram Group Join Now

ಹಸಿರು ಕ್ರಾಂತಿ ವರದಿ, ಜಮಖಂಡಿ: ನಗರದ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಸಂಗ್ರಹಿಸಲಾಗಿರುವ ಕಸದ ರಾಶಿಯನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ತಾಲ್ಲೂಕಿನ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಉಪವಿಭಾಗ ಆಸ್ಪತ್ರೆ ಕಸದ ರಾಶಿಯಿಂದ ನರಕದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಯೋವೃದ್ದರು, ವಯಸ್ಕರು ವಿವಿಧ ರೋಗಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ಕಸದ ರಾಶಿ,ಯಿಂದ ದುರ್ವಾಸನೆ ಹರಡಿದ್ದು ಮೂಗು ಮುಚ್ಚಿಕೊಂಡು ಓಡಾಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಮತ್ತಷ್ಟು ರೋಗಗಳು ಹರಡುವ ಹಾಗೂ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ ಕವರಗಳಲ್ಲಿ ತಿಂದು ಉಳಿಸಿ ಬಿಸಾಡಿದ ತಿಂಡಿ ತಿನಿಸುಗಳು, ಬಳಕೆಯನಂತರ ಬಿಸಾಡಿದ ಆಸ್ಪತ್ರೆಯ ತ್ಯಾಜ್ಯಗಳಿಂದ, ವಾತಾವರಣ ಕಲುಸಿತ ಗೊಂಡಿದೆ. ಆಸ್ಪತ್ರೆಗೆ ಕಾಲಿಟ್ಟ ಕೂಡಲೇ ಮೂಗು-ಬಾಯಿ ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳು ಚೇತರಿಸಿ ಕೊಳ್ಳುದಾದರೂ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಈಗಲಾದರೂ ಸಂಬಂಧ ಪಟ್ಟವರು ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಯ್ದು ಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Share This Article