ವಾರಾಣಸಿ, ಅಕ್ಟೊಬರ್ 10: ಲಿವ್-ಇನ್ ಸಂಬಂಧದ ಬಗ್ಗೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ನೀಡಿರುವ ಹೇಳಿಕೆ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಲಿವ್-ಇನ್ ಸಂಬಂಧದಿಂದ ದೂರವಿರಿ ಇಲ್ಲದಿದ್ದರೆ ನಿಮ್ಮನ್ನು 50 ತುಂಡುಗಳಾಗಿ ಕತ್ತರಿಸುತ್ತಾರೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಈ ಲಿವ್-ಇನ್ ಸಂಬಂಧವನ್ನು ತಪ್ಪಿಸುವಂತೆ ಒತ್ತಾಯಿಸುತ್ತಾ, ನಾನು ಹುಡುಗಿಯರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ಸಂಬಂಧಗಳು ಒಂದು ಪ್ರವೃತ್ತಿಯಾಗಿದೆ. ಆದರೆ ಅದರಿಂದ ದೂರವಿರಿ ಎಂದು ಹೇಳಿದರು. ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿರುವ ರಾಜ್ಯಪಾಲರು ಕಟು ಎಚ್ಚರಿಕೆ ನೀಡಿದ್ದಾರೆ. ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ 47 ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.


