ಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನಕ್ಕೆ ಮಹಾಂತೇಶ ದೊಡ್ಡಗೌಡರ ನಾಮಪತ್ರ ಸಲ್ಲಿಕೆ

Ravi Talawar
ಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನಕ್ಕೆ ಮಹಾಂತೇಶ ದೊಡ್ಡಗೌಡರ ನಾಮಪತ್ರ ಸಲ್ಲಿಕೆ
WhatsApp Group Join Now
Telegram Group Join Now
ಬೆಳಗಾವಿ. ಜಿಲ್ಲೆಯ ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಗೆ  ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಗೆ  ಬೈಲಹೊಂಗಲ ತಾಲೂಕಾ ಕ್ಷೇತ್ರದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು  ಗುರುವಾರದಂದು ಡಿಸಿಸಿ ಬ್ಯಾಂಕ ಮುಖ್ಯ ಶಾಖೆ ಬೆಳಗಾವಿಯಲ್ಲಿ ಚುನಾವಣೆ  ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
   ನಾಮಪತ್ರ ಸಲ್ಲಿಸಿ ಮಹಾಂತೇಶ ದೊಡ್ಡಗೌಡರ ಮಾತನಾಡಿ ಬೈಲಹೊಂಗಲ ತಾಲೂಕಿನಲ್ಲಿ ಒಟ್ಟು 73  ಪಿಕೆಪಿಎಸ್ ಸಂಘಗಳು  ಕಾರ್ಯನಿರ್ವಹಿಸುತ್ತಿದ್ದು ಅವುಗಳಿಗೆ ಹೊಸ ಕಟ್ಟಡ, ಗೋಡಾವನ, ರೈತರಿಗೆ ಸಾಲ, ಟ್ರ್ಯಾಕ್ಟರ್ ವಿತರಣೆ, ಗಣಕೀಕರಣ, ಪತ್ತು ಹೆಚ್ಳಳಕ್ಕೆ ಆದ್ಯತೆ,ರೈತರ ಬೆಳವಣಿಗೆ ಕಳೆದ 30 ವರ್ಷಗಳಿಂದ  ಡಿಸಿಸಿ ಬ್ಯಾಂಕ ನಿರ್ದೇಶಕ, ಉಪಾಧ್ಯಕ್ಷನಾಗಿ ಪ್ರಾಮಾಣಿಕ ಕಾರ್ಯ ಮಾಡಿದ್ದು ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಸವಲತ್ತು ಕಲ್ಪಿಸುವ  ಕಾರ್ಯ ಮಾಡುತ್ತೇನೆ.ಹಿಂದಿನ ಅವಧಿಯಲ್ಲಿ  ಕಿತ್ತೂರು ಬೈಲಹೊಂಗಲ ಸೇರಿದ್ದಂತೆ ಒಟ್ಟು 105 ಪ್ರಾಥಮಿಕ ಸಹಕಾರಿ ಸಂಘಗಳ ಬೆಳವಣಿಗೆ  ಉತ್ತೇಜನ ನೀಡಿದ್ದು ಸದಾ ರೈತರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಶಾಸಕನಾಗಿ ಹಲವಾರು ಜನಪರ ಕಾರ್ಯ ಮಾಡಿ ಮುಂದೆ ಸದಾ ರೈತಪರ ಕೆಲಸ ಮಾಡುತ್ತೇನೆ. ಬೈಲಹೊಂಗಲ ತಾಲೂಕಿನಲ್ಲಿ 73 ಪಿ ಕೆ ಪಿ ಎಸ್ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳನ್ನು ಬೆಳೆಸಿ ರೈತರ ಧ್ವನಿಯಾಗಿ ನಿಲ್ಲುತ್ತೇನೆ ಮತ್ತು ನಮ್ಮ ಜಯ ಖಚಿತ ಎಂದರು.
   ಈ ನಾಮಪತ್ರ ಸಲ್ಲಿಕೆ ವೇಳೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅರವಿಂದ ಪಾಟೀಲ, ಶಾಸಕ ವಿಶ್ವಾಸ ವೈದ್ಯ, ವೀರೂಪಾಕ್ಷ ಮಾಮನಿ, ಮಾಜಿ ಶಾಸಕ ಜಗದೀಶ ಮೆಟಗುಡ, ಅಪ್ಪಸಾಹೇಬ ಕುಲಗಡೆ,ವಿಕ್ರಮ ಇನಾಮದಾರ, ರಾಜಶೇಖರ್ ಯತ್ತಿನಮನಿ, ಗುರು ಮೆಟಗುಡ, ವಿಜಯ ಮೆಟಗುಡ, ರಾಮನಗೌಡ ದೊಡ್ಡಗೌಡರ, ಸಿ ಆರ್ ಪಾಟೀಲ, ಸುನೀಲ ಮರಕುಂಬಿ, ಬಾಳಾಸಾಹೇಬ ದೇಸಾಯಿ, ಎಸ್ ಎಮ್ ಪಾಟೀಲ, ನಿಂಗನಗೌಡ ದೊಡ್ಡಗೌಡರ, ಅಡಿವಪ್ಪ ಮಾಳಣ್ಣವರ, ಕುಮಾರಗೌಡ ಪಾಟೀಲ, ಪ್ರಕಾಶ ಮುಗಬಸವ, ಬಿ ಕೆ ಪಾಟೀಲ, ಸೋಮನಗೌಡ ಪಾಟೀಲ, ಮಹಾಂತೇಶ ಏಣಗಿ, ಅಡಿವಪ್ಪ ಹೊಸಮನಿ, ಮಲ್ಲಿಕಾರ್ಜುನ ಕಲ್ಲೋಳಿ  ಸೇರಿದಂತೆ ಬೈಲಹೊಂಗಲ ತಾಲೂಕಾ ಪಿಕೆಪಿಎಸ್ ಸದಸ್ಯರು, ಮುಖಂಡರು, ರೈತರು, ದೊಡ್ಡಗೌಡರ ಅಭಿಮಾನಿಗಳು  ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article