ಬೆಳಗಾವಿ. ಇಂದು ನಮ್ಮ ಬಣದ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಉಳಿದ 6 ಜನ ಬರುವ ಅ. 11 ರಂದು ನಾಮಪತ್ರ ಸಲಿಕೆ ಮಾಡುತ್ತಾರೆ. ಹುಕ್ಕೇರಿ ತಾಲೂಕಿನಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಗೆಲುವು ಬೆಳಗಾವಿ ಡಿ ಸಿ ಸಿ ಬ್ಯಾಂಕ ಚುನಾವಣೆ ಮೇಲೆ ಪ್ರಭಾವ ಬೀರದು ಮತ್ತು ಅದು ಒಂದು ತಾಲೂಕ ಮಟ್ಟದ ಚುನಾವಣೆ ಇದು ಜಿಲ್ಲಾ ಮಟ್ಟದ ಚುನಾವಣೆ ಆಗಿರುವದರಿಂದ ನಮ್ಮ ಬೆಂಬಲಿತ 13 ಜನರ ಆಯ್ಕೆ ಖಚಿತ ಎಂದರು. ರಮೇಶ ಕತ್ತಿ ನಮ್ಮ ಕುಟುಂಬದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಅದಕ್ಕೆ ಕಾನೂನು ಮುಖಾಂತರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಒಂದು ಬ್ಯಾಂಕ ಯಾರ ಅಪ್ಪನ ಅಸ್ತಿ ಅಲ್ಲ ಎಂಬ ರಮೇಶ ಕತ್ತಿ ಮಾತಿಗೆ ಹೌದು ಅದು ಯಾರ ಅಪ್ಪನ ಬ್ಯಾಂಕು ಅಲ್ಲ ಇದು ರೈತರ ಬ್ಯಾಂಕಾಗಿದೆ ಎಂದರು. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ದಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಬಂದರೆ ಸ್ವಾಗತ ಮತ್ತು ಅವರಿಗೆ ಒಳ್ಳೇದು ಆಗಲಿ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಗುರುವಾರದಂದು ಡಿಸಿಸಿ ಬ್ಯಾಂಕ ಮುಖ್ಯ ಶಾಖೆಯಲ್ಲಿ ಅವರ ಬಣದ ಸದಸ್ಯರಾದ ಅಣ್ಣಾಸಾಹೇಬ ಜೊಲ್ಲೆ,(ನಿಪ್ಪಾಣಿ ತಾಲೂಕ ) ಮಹಾಂತೇಶ ದೊಡ್ಡಗೌಡರ (ಬೈಲಹೊಂಗಲ ತಾಲೂಕ ), ಅರವಿಂದ ಪಾಟೀಲ (ಖಾನಾಪುರ ತಾಲೂಕ ) ವಿಶ್ವಾಸ ವೈದ್ಯ (ಯರಗಟ್ಟಿ ತಾಲೂಕ )ವಿಕ್ರಂ ಇನಾಮದಾರ (ಚ. ಕಿತ್ತೂರು ತಾಲೂಕ )ವೀರೂಪಾಕ್ಷ ಮಾಮನಿ ( ಸವದತ್ತಿ ತಾಲೂಕ )ಅಪ್ಪಸಾಹೇಬ ಕುಲಗುಡೆ (ರಾಯಭಾಗ ತಾಲೂಕ ) ಇವರುಗಳು ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ ಎಲ್ಲ 52 ಸಹಕಾರ ಪ್ರತಿನಿದಿಗಳನ್ನು ಕರೆತಂದು ನಾಮಪತ್ರ ಸಲ್ಲಿಸಿದ್ದಾರೆ. ನಾವು ಪ್ರತಿರೋಧ ಒಡ್ದುಟ್ಟಿದ್ದು ಗೆಲುತ್ತೇವೆ ಎಂದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಕೆಟ್ಟ ಜನ ಜೊತೆ ಸಹವಾಸ ಮಾಡಬೇಡಿರಿ ಎಂದಿದ್ದಾರೆ ನಮ್ಮಗೂ ಗೊತ್ತು ಯಾರು ಕೆಟ್ಟವರು, ಯಾರು ಒಳ್ಳೆಯವರು ನಾವು ಸಹಕಾರಿ ರಂಘ ಬೆಳೆಸಿ ಮುಂದೆ ಬಂದಿದ್ದೇವೆ ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಮತ್ತು ನಮ್ಮ ವಿರುದ್ಧ ಉತ್ತಮ ಪಾಟೀಲ ಸ್ಪರ್ಧೆ ಮಾಡುತ್ತಿದ್ದು ಅದ್ದರಿಂದ ಎಲ್ಲರಿಗೂ ಸ್ಪರ್ಧೆ ಮಾಡುವ ಅವಕಾಶ ಇದೆ ಎಂದರು.
ಈ ಸಂದರ್ಭದಲ್ಲಿ ಎಲ್ಲ ನಾಮಪತ್ರ ಸಲ್ಲಿಸಿದ 7 ಜನ ಅಭ್ಯರ್ಥಿಗಳು ಮತ್ತು ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.